14/02/2019 ಅವಂತಿಪುರಾ ಪುಲ್ವಾಮಾ ,78 ಬಸ್ಸುಗಳಲ್ಲಿ 2000 ಕ್ಕೂ ಹೆಚ್ಚಿನ ಯೋಧರು ಸಂಚರಿಸುತಿದ್ದರು. ಇದ್ದಕಿದ್ದಂತೆ ಒಬ್ಬ ಉಗ್ರ 200 ಟನ್‌ನಿಷ್ಟೂ ಸ್ಪೋಟಕಗಳೊಂದಿಗೆ ತನಗೆ ಸ್ವರ್ಗ ಸಿಗುತ್ತದೆಂಬ ಭ್ರಮೆಯಲ್ಲಿ ಕಾರಿನಲ್ಲಿ ಬಂದು CRPF ಸೈನಿಕರು ಸಂಚರಿಸುತಿದ್ದ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಭಯಂಕರವಾದ ಕೃತ್ಯವನ್ನು ಎಸಗಿದ.40ಕ್ಕೂ ಹೆಚ್ಚು ಯೋಧರು ಸ್ವರ್ಗವಾಸಿಗಳಾದರು.ಒಬ್ಬವನು ಮಾತ್ರ ನರಕದ ಬಾಗಿಲು ತಟ್ಟಿದ.ಭಾರತೀಯರ ಮನಸ್ಸು ಅಲ್ಲೋಲ ಕಲ್ಲೋಲವಾಯಿತು.ನಿಸ್ವಾರ್ಥ ಸೇವೆ ಮಾಡಿದವರು ಹುತಾತ್ಮರಾದ ಸುದ್ದಿಯನ್ನು ಕೇಳಿ ಭಾರತೀಯರು ದು:ಖದಲ್ಲಿ ಮುಳುಗಿದರು.ಅನೇಕರು ತಮ್ಮದೆ ಆದ ರೀತಿಯಲ್ಲಿ ರೋಷ ಹೊರಹಾಕತೊಡಗಿದರು.ತನ್ನ ಮಗ ,ಪತಿ,ಅಪ್ಪನನ್ನ ಕಳೆದುಕೊಂಡ ಪರಿವಾರದ ಆಕ್ರಂದನ ಮುಗಿಲು ಮುಟ್ಟಿತ್ತು.ಇಷ್ಟಾದರೂ ಪಾಕಿಸ್ತಾನದ ವಿರುದ್ಧ ನಾವು ಗುಂಡು ಹಾರಿಸದೆ ಪಾರಿವಾಳ ಹಾರಿಸಬೇಕು ಎಂದು ಹೇಳುತ್ತಿರುವರಲ್ಲ ಯಾರವರು? ಬೇರೆ ಯಾರು ಅಲ್ಲ ರೀ ನಾವೆ ಆರಿಸಿ ಕಳಿಸಿರೋ ನಾಯಕರು, ನಟಿಯರೂ. ಯಾಕೇ ಇವರಿಗೆ ಆ ಪರಿವಾರದ ಆಕ್ರಂದನ ಕೇಳಿಸಲಿಲ್ಲವೇ? ಅಥವಾ ಅವರ ಆಕ್ರಂದನ ಧ್ವನಿ ಕಡಿಮೆಯಾಯಿತೆ?
ಇಂಥವರ ಮನಸ್ಸಿನಲ್ಲಿ ಇರೋದು ಇಷ್ಟೆ ಏನೋ ನಲವತ್ತು ಸೈನಿಕರು ಹೋಗ್ಲಿ ಬಿಡಿ ಅದಕ್ಯಾಕೆ ಇಷ್ಟು ರೋಷ ? ಆಕ್ರೋಷ? ಅನ್ನೋ ಭಾವನೆ .ಇಂಥವರಿಗೆ ಅಭಿಮಾನಿಗಳು ಬೇರೆ!(ಅಂಧಾಭಿಮಾನಿಗಳು). ಇದೇ ವ್ಯಕ್ತಿ ಏನೋ ಒಂದು ಬಂಗಾರದ ಪದಕನೋ /ಬಂಗಾರದ ಕಪ್ಪು ಗೆದ್ದದ್ದನ್ನ ಕಳೆದುಕೊಂಡಾಗ ಏನೋ ಒಂದು ಬಂಗಾರದ ಪದಕ ತಾನೆ ಹೋಗ್ಲಿ ಬಿಡಿ ಅಂತ ನಾವು ಅಂದಾಗ ಸುಮ್ಮನಿರುತ್ತೀರಾ!? ಅದೇ ರೀತಿ ಸೈನಿಕನೂ ಕೂಡ. ಬಂಗಾರದ ಪದಕ್ಕೇನೋ ಬೆಲೆ ಕಟ್ಟಬಹುದು ಆದರೆ ನಮ್ಮ ನಿಮ್ಮಲ್ಲರಿಗಾಗಿ ನಿಸ್ವಾರ್ಥದಿಂದ ಗಡಿಯಲ್ಲಿ ನಿಂತು ಯಾವ ಕ್ಷಣದಲ್ಲಿಯೂ ವೈರಿ ಬರಬಹುದು ನೀವು ನಿಶ್ಚಿಂತೆಯಿಂದ ಇರಿ ನಾನು ಎದಿರುಸುತ್ತೇನೆ ಅನ್ನುವ ಆ ಜೀವಕ್ಕೆ ನೀವೂ ರೀತಿಯ ಬೆಲೆ ಕೊಡಬಹುದಾ?

ಯಾಕೆ ನಾವು ಯೋಧನ ಬಗ್ಗೆ ಹೆಮ್ಮೆ ಪಡಬೇಕು?
ಸೈನಿಕರೂ ನಾವು ಪ್ರವಾಹದಲ್ಲಿ ಸಿಲುಕಿದಾಗ ಬರುತ್ತಾರೆ,ಭೂಕಂಪದಲ್ಲಿ ನಲುಗಿದಾಗ ಜನರನ್ನ ರಕ್ಷಣೆ ಮಾಡಲು ಬರುತ್ತಾರೆ.ಅವರ ಸಹಯೋಧನ ಮೇಲೆ ದಾಳಿಯಾಗಿ ಗಾಯಗೊಂಡಾಗೂ ಕೂಡ ಅವರವರೇ ಉಪಚರಿಸಿಕೊಂಡು ನಮ್ಮನ್ನ ಯಾರೂ ಕರೆಯೂದಿಲ್ಲ ಯಾಕೆ?
ಅವರು ಹೇಳೋದು ಇಷ್ಟೆ 'ನೀವು ಸುಖದಿಂದಿರಿ,ನಮ್ಮ ಪ್ರಾಣವನ್ನು ಒತ್ತೆ ಇಟ್ಟಾದರೂ ನಿಮ್ಮನ್ನು ಕಾಪಾಡುತ್ತೇವೆ. ನಮ್ಮನ್ನು ಯಾವ ಶುಭ ಸಂದರ್ಭಕ್ಕೂ ಕರೆಯಬೇಡಿ,ನಿಮಗೆ ಕಷ್ಟ ಬಂದಾಗ ಹೇಳಿ ನಮ್ಮ ತಂದೆ ತಾಯಿ ಹೆಂಡತಿ ಮಕ್ಕಳನ್ನೂ ಬಿಟ್ಟು ಬರುತ್ತೇವೆ.'
ಈಗ ಹೇಳಿ ಹೆಮ್ಮ ಪಡಬಾರದಾ? ಇಂತಹ ನಿಸ್ವಾರ್ಥಿಗಳು ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾದಾಗ ನಿಮ್ಮ ರಕ್ತ ಕುದಿಯಲ್ಲವಾ?

43 ಸೈನಿಕರೂ ತಾನೆ ! ಎನ್ನುವ ಮನಸ್ಥಿತಿ ಉಳ್ಳವರಿಗೆ ಉತ್ತರ
ಏನೋ 40-43 ಸೈನಿಕರು ತಾನೆ ,ಅದಕ್ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳತೀರಿ ಅನ್ನುವ ಅಯೋಗ್ಯರಿಗೆ ಸೈನಿಕನ ಶಕ್ತಿಯ ಬಗ್ಗೆ ಅರಿವು ಇದೆಯಾ?
ಭಾರತ ಕಲ್ಲು ಹೊಡೆಯುವವರನ್ನ ಒಯ್ದು ಕೈಯಲ್ಲಿ ಬಂದೂಕು ಭಯೋತ್ಪಾದಕರನ್ನು ಮಾಡುವ ದೇಶವಲ್ಲ. ಸೇನೆಯಲ್ಲಿ ಭರ್ತಿಯಾಗಬೇಕಾದರೆ ಪರೀಕ್ಷೆ ಬರಿಯಬೇಕು ,ಫಿಸಿಕಲ್ ಟೆಸ್ಟ ಪಾಸ ಆಗಬೇಕು ,ಟ್ರೈನಿಂಗ ಪಡೆಯಬೇಕು ಇಷ್ಟೂ ಚಿಕ್ಕ ವಿಷಯ ಗೊತ್ತಿರದ ಅಯೋಗ್ಯರನ್ನು ಯೋಗ್ಯರು ಅನ್ನುವ ಪಟ್ಟ ಕೊಟ್ಟು ಕೂರಿಸಿದ್ದೇವೆ.
ಪುಲ್ವಾಮಾ ಘಟನೆಯ ನಂತರ ಭಾರತೀಯ ಸೈನಿಕ ಒಂದು ವೀಡಿಯೋದಲ್ಲಿ ಎಷ್ಟು ನೋವಿನಿಂದ ದು:ಖವನ್ನು ಹೇಳಿಕೊಂಡಿದ್ದಾನೆಂದರೆ, ' ಪ್ರಧಾನ ಮಂತ್ರಿಗಳೆ! ನೀವು ಆಜ್ಞೆ ಕೊಡಿ ನನ್ನ 3 ಸಹ ಯೋಧರೊಂದಿಗೆ ಪಾಕಿಸ್ತಾನಕ್ಕೆ ನುಗ್ಗಿ ನಮ್ಮ 40 ಸೈನಿಕರನ್ನ ಕೊಂದಿದ್ದಾರಲ್ಲಾ ನಾವು 400 ತಲೆ ಕಡಿದು ಬರುತ್ತೇವೆ ,ನನ್ನ ತಾಯಿ ಮೇಲೆ ಆಣೆ ಮಾಡುತ್ತೇನೆ.' ಆ ನೋವಿನ ಹಿಂದೆ ಇರುವ ರೋಷ ಆಕ್ರೋಷ ,ಆ ಸೈನಿಕನ ಶಕ್ತಿ ಅರ್ಥವಾಗ್ತಾಯಿಲ್ಲಾ ನಿಮಗೆ?
ಕೇವಲ ನಾಲ್ಕೇ ನಾಲ್ಕು ಸೈನಿಕರು ನಮಗೆ ಆಜ್ಞೆ ಕೊಡಿ 400 ಜನರನ್ನು ಕೊಂದು ಬರ್ತೇವೆ ಅಂತ ಪ್ರಮಾಣ ಮಾಡುವ ಈ ಯೋಧ ,ಅದೇ ರೀತಿ ಹುತಾತ್ಮರಾದ ಆ 43 ಸೈನಿಕರೂ ಇದೇ ರೀತಿ ಮಾಡಿದ್ದರೆ ಏನಾಗುತಿತ್ತು? ಯೋಚನೆ ಮಾಡಿದ್ದೀರಾ?

ಇದು ಅರ್ಥವಾಗದಿದ್ದರೇ ,ಒಂದು ಕೆಲಸ ಮಾಡಿ ಸೂಜಿಯನ್ನು ತೆಗೆದುಕೊಂಡು ನಿಮ್ಮ ಬೆರಳಿಗೆ ಅಥವಾ ಉಗುರಿನ ಹಿಂಭಾಗದಲ್ಲಿ ಚುಚ್ಚಿಕೊಳ್ಳಿ ನೋಡೋಣ.
ಯೋಚನೆ ಮಾಡಿದ್ರೇನೆ ಭಯ ಬರುತ್ತೆ ಅಂಥದ್ರಲ್ಲಿ ನಮ್ಮೆಲ್ಲರಿಗಾಗಿ ಗುಂಡನ್ನು ಹೊಡೆಸಿಕೊಳ್ಳಲು ತಯಾರಿರುತ್ತಾರೆ.
ಯೋಚನೆ ಮಾಡಿದ್ರೇನೆ ಭಯ ಬರುತ್ತೆ ಅಂಥದ್ರಲ್ಲಿ ನಮ್ಮೆಲ್ಲರಿಗಾಗಿ ಗುಂಡನ್ನು ಹೊಡೆಸಿಕೊಳ್ಳಲು ತಯಾರಿರುತ್ತಾರೆ.
ಪುಲ್ವಾಮಾ ಘಟನೆಯ ನಂತರ ನನಗೆ ಇಷ್ಟವಾದ ಕೆಲ ವಿಷಯಗಳು
* ರಾಜಕಾರಣಿಯಾಗ ಬೇಕಾದರೆ 5 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ .ನಮ್ಮ ದೇಶ 80 ಪ್ರ ಅಭಿವೃದ್ಧಿಯಾಗುವುದು.
*ಪುಲ್ವಾಮಾದಲ್ಲಿ ನಡೆದ ಘಟನೆಯಲ್ಲಿ ಹುತಾತ್ಮರಾದ ಕರ್ನಾಟಕದ ಮಂಡ್ಯದ ವೀರ ಯೋಧ ಹೆಚ್.ಗುರು ಅವರ ಪಾರ್ಥೀವ ಶರೀರ ಊರಿಗೆ ಬಂದಾಗ ,ಇಡೀ ಊರಿನ ಜನ ಭಾರತ ಮಾತಾ ಕೀ ಜೈ ,ವೀರ ಪುತ್ರ ಗುರು ಅವರಿಗೆ ಜಯವಾಗಲಿ ಅಂದಾಗ ನನ್ನ ಕಣ್ಣೀರು ಉಕ್ಕಿ ಬಂತು.
*ಕರ್ನಾಟಕದ ಒಬ್ಬ ಮುಸ್ಲಿಂ ಯುವಕ 'ಪ್ರಧಾನಿಯವರಿಗೆ ಪತ್ರ ಬರೆದು , " ನನ್ನ ದೇಶದ ಸೈನಿಕರನ್ನು ಕುತಂತ್ರದಿಂದ ಕೊಂದು ಬೀಗುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿ ,ಅಗತ್ಯ ಬಿದ್ದರೆ ನನ್ನ ರಕ್ತವನ್ನು ಕೊಡುತ್ತೇನೆ."
*ಇನ್ನೂರ್ವ ಯುವಕ " ನಾನು NCC ಕೆಡೆಟ್‌ನಲ್ಲಿದ್ದು ನನಗೂ ರೈಫಲ್ ಚಲಾಯಿಸಲು ಗೊತ್ತು ,ಅಗತ್ಯ ಬಿದ್ದರೆ ಕರೆಯಿರಿ ನಾನು ಯುದ್ಧ ಮಾಡಲು ಬರುತ್ತೇನೆ.
* ಮೃತಯೋಧ ರತನ್ ಠಾಕೂರ ತಂದೆ , ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ನನ್ನ ಎರಡೆನೆಯ ಮಗನನ್ನು ಭಾರತೀಯ ಸೇನೆಗೆ ಸೇರಿಸುತ್ತೇನೆ.
*ಗೌತಮ ಗಂಭೀರ ಮತ್ತು ವೀರೆಂದ್ರ ಸೆಹ್ವಾಗ ಪುಲ್ವಾಮಾದಲ್ಲಿ ಹುತಾತ್ಮರಾದ ವೀರಯೋಧರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನೋಡಿಕೊಳ್ಳುವುದಾಗಿ ಹೇಳಿರುವುದು.

ಇನ್ನು ಹೇಳಲು ಬಹಳ ವಿಷಯ ಇದೆ ,ಮುಂದುವರೆಸುವೆ.
ಜೈ ಹಿಂದ ಜೈ ಭಾರತ
- HRK