ಸೋಮವಾರ, ಸೆಪ್ಟೆಂಬರ್ 28, 2020

ಬಚ್ಚನ ಜೀ ಹೀಗೂ ಹೇಳಿರಬಹುದಾ?

ಮದಿರಾಲಯ ಜಾನೇ ಕೋ
ಘರ ಸೇ ಚಲತಾ ಹೈ ಪೀನೇವಾಲಾ,
ಕಿಸ್ ಪಥ ಸೋ ಜಾವೂಂ ಅಸಮಂಜಸ್
ಮೇ ಹೈ ವಹ ಭೋಲಾ ಭಾಲಾ,
ಅಲಗ್ ಅಲಗ್ ಪಥ ಬತಲಾತೇ ಸಬ್
ಪರ ಮೇ ಯಹ ಬತಲಾತಾ ಹೂಂ,
ರಾಹ ಪಕಡ ತೂ ಏಕ್ ಚಲಾ ಚಲ
ಪಾ ಜಾಯೇಗಾ ಮಧುಶಾಲಾ|

ಹಿಂದಿ ಭಾಷೆಯ ಪ್ರಸಿದ್ಧ ಕವಿ ,ಲೇಖಕರಾದ ಹರಿವಂಶರಾಯ ಬಚ್ಚನ ಅವರು ಬರೆದಿರುವ 'ಮಧುಶಾಲಾ' ದಿಂದ ಆಯ್ದ ಪದ್ಯ ಭಾಗವಿದು.  ಏನೋ ಗೊತ್ತಿಲ್ಲ ಈ ಪದ್ಯಭಾಗ ಬಹಳ ಹಿಡಿಸಿತು. ಕಾರಣ ತಿಳೀಲಿಲ್ಲ .7-8 ಸಲ ಓದಿದೆ , ಪ್ರತಿ ಬಾರಿ ಓದುವಾಗಲು ಇದರಲ್ಲೇನೋ ಇದೆ ಅದನ್ನು ತಿಳಿಸೋ ಎಂದು ನನ್ನ ಒಳಮನಸ್ಸು ಹೇಳುತ್ತಲೆ ಇತ್ತು. ಹೀಗೆ ಓದುತ್ತಲೇ,ಪಠಿಸುತ್ತಲೇ ಇರುವಾಗ ಹೊಳೆದಿದ್ದೆ 'ಬಚ್ಚನ ಜೀ ಹೀಗೂ ಹೇಳಿರಬಹುದಾ?' ಅಂತ


ಮೇಲಿರುವ ಪದ್ಯ ಭಾಗದಲ್ಲಿ 'ಮದಿರಾಲಯ' ಮತ್ತು 'ಮಧುಶಾಲೆ' ಪದಗಳನ್ನು ತೆಗೆದು ಅಲ್ಲಿ ನಮ್ಮ ಜೀವನದ ಧ್ಯೇಯ,ಗುರಿ ಇಟ್ಟುಕೊಳ್ಳೋಣ.(ಮಧುಶಾಲೆ,ಮದಿರಾಲಯ ಅಂದ್ರೆ ಮದ್ಯದಂಗಡಿ ಅಂತ ಅರ್ಥ). ಪೀನೇವಾಲಾ ಪದ ತೆಗೆದು ನಮ್ಮನ್ನು ಅಲ್ಲಿ ಕಲ್ಪಿಸಿಕೊಳ್ಳೋಣ. (ಪೀನೆವಾಲಾ ಅಂದ್ರೆ ಮದ್ಯ ಸೇವಿಸುವವನು ಅಂತ ಅರ್ಥ)


    ಈಗ ಆ ಪದ್ಯಭಾಗವನ್ನ ಅವಲೋಕಿಸುತ್ತ ಬರೋಣ 'ಮದಿರಾಲಯ ಜಾನೇ ಕೋ ಘರ ಸೇ ಚಲತಾ ಹೈ ಪೀನೇವಾಲಾ ' ಅಂತ ಇದೆ ಸಾಮಾನ್ಯವಾಗಿ ನಮಗೆ ತಿಳುವಳಿಕೆ ಬಂದಾಗ ಒಂದು ಧ್ಯೇಯ ಇಟ್ಟಕೊಂಡು ಮುಂದೆ ಹೋಗಬೇಕು ಅಂತ ಇರ್ತೇವೆ. ಆಗ ನಮಗೆ ಅದರ ದಾರಿಯ ಬಗ್ಗೆ ಹೆಚ್ಚಿನ ಅರಿವು ಇರುವದಿಲ್ಲ ,ಅಥವಾ ನಮಗೆ ಯಾವ ದಾರಿಯಿಂದ ಹೋದರೆ ಆ ಗುರಿ ಮುಟ್ಟಬಹುದು ಎಂಬ ಯೋಚನೆಯಲ್ಲಿರುತ್ತೇವೆ .ಅದೇ 'ಕಿಸ್ ಪಥ(ದಾರಿ) ಸೇ ಜಾವೂಂ ಅಸಮಂಜಸ್ ಮೇ ಹೈ ವಹ ಭೋಲಾ ಭಾಲಾ.


ಆದ್ರೆ ಜನ ಆ ದಾರಿ ಹಿಡಿ ನಿನಗೆ ಒಳ್ಳೆದಾಗುತ್ತೆ , ನಾ ಹೇಳಿದ್ದು ಕೇಳು ಹೀಗೆ ಮಾಡು , ಇಂಜಿನಿಯರಿಂಗ ಮಾಡು ಅಂತ ಒಬ್ರು , ಇಂಜಿನಿಯರಿಂಗ ಒಳಗ ಮೆಕ್ಯಾನಿಕಲ್ ಮಾಡು ನಿಂಗ ಸ್ಕೋಪ ಅದ , ಇನ್ನೊಬ್ರು ಟಾಪರ್ ಸಹವಾಸ ಮಾಡು ಸ್ಕೋರ ಆಗ್ತದ ಅಂತ ಹಿಂಗ ಅನಂತ ಮಾರ್ಗಗಳನ್ನ ತೋರಿಸುತ್ತಾ ಇರುತ್ತಾರೆ. ಇದೇ ಅಲಗ್ ಅಲಗ್ (ಬೇರೆ ಬೇರೆ) ಪಥ ಬತಲಾತೇ ಸಬ್ ಎಂದು ಮುಂದುವರೆಸುತ್ತಾ ಬಚ್ಚನ ಜೀ ನಾ ಒಂದು ಮಾರ್ಗ ಹೇಳ್ತೀನಿ ಕೇಳು ಅಂತ 'ರಾಹ್ ಪಕಡ್ ತೂ ಏಕ ಚಲಾ ಚಲ್ ಪಾ ಜಾಯೇಗಾ ಮಧುಶಾಲಾ'  ನೀ ಯಾವುದೇ ಒಂದು ಹಾದಿ ಹಿಡಿಯಪ್ಪ  ನಿನ್ನ ಗುರಿ ನೀ ತಲುಪೇ ತಲುಪುತ್ತಿಯಾ ಅಂತ.ಬಚ್ಚನ ಜೀ ಈ ಪದ್ಯಭಾಗ ಹೀಗು ಅರ್ಥೈಸಿದ್ದಾರೆ ಅಂತ ಇದು ನನ್ನ ಅನಿಸಿಕೆಯಷ್ಟೆ.


ಇದಕ್ಕೆ ಹೊಂದಾಣಿಕೆಯಾಗುವಂತೆ ಕಗ್ಗದ ರೂಪದಲ್ಲಿ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗದಲ್ಲಿಯೂ ಕಾಣುತ್ತೇವೆ.


'ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು ।ನೆನೆಯದಿನ್ನೊಂದನೆಲ್ಲವ ನೀಡುತದರಾ ।।ಅನುಸಂಧಿಯಲಿ ಜೀವಭಾರವನು ಮರೆಯುವುದು ।ಹನುಮಂತನುಪದೇಶ – ಮಂಕುತಿಮ್ಮ ।।'

ಭಾಷೆ ಬೇರೆಯಿರಬಹುದು, ಅರ್ಥ ಕೊಂಚ ಭಿನ್ನವಿದ್ದರೂ ತತ್ವ ಒಂದೇ. ತತ್ವ ಇದೇ ಎಂದರೆ ತತ್ವೋಪದೇಶಕ ಇರಲೇಬೇಕಲ್ಲವೇ?  ತತ್ವವನ್ನ ಹೊರಗೊಳಗೆ ಆವರಿಸಿದವನು ಯಾವನೋ ಅವನೇ ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಬರೀ ಗೀಚು ಗೀಚು ಅಂತಾನೆ.

ಕಡೆಯದಾಗಿ ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶೀರ್ವದಿಸಿ‌.

-Hrk

ಸೋಮವಾರ, ಸೆಪ್ಟೆಂಬರ್ 14, 2020

ಇರುಳರಾಯನ ಮಗಳು

ಹುಣ್ಣಿಮೆಯ ರಾತ್ರಿಯಲಿ

ಚೆಲುವ ಚಂದ್ರನೆದುರು 

ಹರಡಿರುವ ಚೆಂದೋಟದಿ 

ಶಶಿಕಾಂತನೊಡಗೂಡಿ 

ನಗುತ ಚೆಂಡೂವಿನಿಂದ 

ಇರುಳುರಾಯನ ಕನ್ನಿಕೆಯಾದ

......ಚಂದ್ರಿಕೆ !!

ಚೆಂಡಾಟವಾಡುತಿರುವೆಯಾ ? 

ಸಾಕಿನ್ನು ಚೆಂಡಾಟವೆಂದು ,

ಚೆಂದದೂಟಕ್ಕೆ ಶಶಿ ಸೋದರಿಯ ಕರೆಯುತಿರಲು,

ಭ್ರಾತೃು ಭಾಸ್ಕರನು ಬರುವವರೆಗೆ 

ಆಡುವೆನೆಂದು ಚೆಂಡಾಟ ಮುಂದುವರೆಸಿದಳು ಚಂದ್ರಮುಖಿ.

ಸಾಕಿವಳ ಹುಡುಗಾಟ ,ಮಾಡಿರಿ ಹುಡುಗನ ಹುಡಕಾಟ ಎಂದು ಚಂದ್ರಕಾಂತಳು ಹಲಬುತ್ತಿರೆ ,

ಇರುಳುರಾಯನ ಮಗನೊಂದಿಗೆ ನಸುನಕ್ಕಳು ಶಶಿವದನೆ. 


-HRK


ಮಂಗಳವಾರ, ಸೆಪ್ಟೆಂಬರ್ 8, 2020

ನಾನು ನನ್ನ ಕನಸು

 ಎಲ್ಲಿ ಹುಟ್ಟಿತೋ ? ಹೇಗೆ ಆರಂಭವಾಯಿತೋ? ಗೊತ್ತಿಲ್ಲ . ಗೊತ್ತಿಲ್ಲದ ಲೋಕದಲ್ಲಿ ಅನುಭವಿಸುತ್ತಾ ತೇಲುತ್ತಿದ್ದೆ . ಹಿಂದಿನಂತೆಯೇ ಕನಸು ಬಿದ್ದರೂ ಈ ಕಂಡ ಕನಸಲ್ಲಿ ಅಷ್ಟು Concentrate ಮಾಡಲಿಲ್ಲ.


ಅದಕ್ಕೇನೆ ಪ್ರಾರಂಭದಲ್ಲಿ ಹಾಗೆ ಹೇಳಿದ್ದು.  ಸಾಮಾನ್ಯವಾಗಿ ಎಲ್ಲರ ಕನಸು ಇದೇ ರೀತಿ ಆರಂಭವಾಗುವುದು.ಹುಟ್ಟುವದು ಎಲ್ಲೆಯೋ ,ಮುಗಿಯುವದೋ ಎಲ್ಲೆಯೋ  ಆದ್ರೆ ಕಾಣುವದು ಮಾತ್ರ ಬಿಟ್ಟಿಲ್ಲ.


      


         ಸಾಮಾನ್ಯವಾಗಿ ಹುಡುಗರ ಕನಸಲ್ಲಿ ಅವರ ಹಳೇ ಪ್ರೇಯಸಿಯೋ, ಅಥವಾ ಈಗಿನ ಜಮಾನಾ ರೀತಿಯೊಳಗ ಹೇಳಬೇಕಂದ್ರ  ಕ್ರಷ್ . ಈಗಿನ Bae ಅಥವಾ ಹಿಡಿಂbae ಕ್ರಷ್ ಆಗಿ ಕನಸಲ್ಲಿ ಬಂದಾಗ ಎದೆ ಬಡಿತ ವೇಗವಾಗಿ ಬಡಿದುಕೊಳ್ಳುತ್ತದೆ. ಮನದಲ್ಲಿ ಅವಳನ್ನು ಭೇಟಿಯಾಗಬೇಕು, ಹಳೆಯ ನೆನಪನ್ನ ಮತ್ತೆ ಮೆಲಕು ಹಾಕಬೇಕು ಅಂತೆಲ್ಲಾ ಅನಿಸುತ್ತದೆ. ಹಾಗೆಯೇ ನನ್ನ ಕನಸಲ್ಲಿ ಬಂದ ಚೆಂದುಳ್ಳಿ ಚೆಲುವೆ ಕಚ್ಚೆ ಸೀರೆಯನುಟ್ಟು ಮದುವೆಯ ಮನೆಯಲ್ಲಿ ಒಡಾಡುತ್ತಿದ್ದಳು. ಇದರ ಮೇಲೆ ಉದ್ದು ಕುಂಕುಮ ಮತ್ತು ಪಿಳಿಪಿಳಿಸುವ ಕಣ್ಣಿಗೆ ಗುಂಡು ಗಾಜಿನ ಕನ್ನಡಕ . ಹಿಂದೆ ಹೆಣ್ಣು ಕನ್ನಡಕ ಧರಿಸಿದರೆ ಗಂಡಿನ ಕಡೆಯವರು ರಿಜೆಕ್ಟ ಮಾಡುವ ಕಾಲವಿತ್ತು .ಈಗ ಅದು  ಹೋಗಿದೆ ಕನ್ನಡಕ ಧರಿಸುವ ಹೆಣ್ಣನ್ನು ಕೈ ತೊಳೆದು ಮುಟ್ಟಬೇಕು. ಒಮ್ಮೆ ಅನುಪಮಾ ಪರಮೇಶ್ವರನ್ ಕನ್ನಡಕ ಹಾಕಿರುವದನ್ನು ಗಮನಿಸಿ. ಹಾಗೆಯೇ ನಮ್ಮ ಕನ್ನಡತಿಗೆ ಕನ್ನಡಕವೇ ಭೂಷಣ ಮತ್ತು ಎಲ್ಲ ಆಭರಣಗಳನ್ನು ಮೀರಿಸುವ ನಗುವೆಂಬ ಆಭರಣ ತೊಟ್ಟು ಓಡಾಡುತ್ತಿದ್ದಳು. ದೇವರಾಣೆಗೂ ಅದು ಯಾರ ಮದುವೆಯಂತ ಅವಳಿಗೂ ಗೊತ್ತಿಲ್ಲ ನಂಗೂ ಗೊತ್ತಿಲ್ಲ. ಅಂತು ಇಂತು ನಾನು ಮದುವೆ ಮನೆ ತಲುಪಿದೆ . ಸುಮ್ಮನೆ ಕುಳಿತಿದ್ದೇ ,ಸಾಮಾನ್ಯವಾಗಿ ಮಹಿಳೆಯರು ಹೆಣ್ಣು ಮಕ್ಕಳು ಮದುವೆ ಮನೇಲಿ ಜಾಸ್ತಿ ಓಡಾಡೋದು ,ನಾವು ಹುಡುಗರೋ ಚೇರಗಳನ್ನ ಜೋಡಸೋದು ಬಿಡಿಸಿಡೋದ್ರಲ್ಲಿ ಇರ್ತೇವೆ ,ಹಾಗಾಗಿ ನನ್ನ ಚೇರ್ ಯಾರು ತೆಗೆದುಕೊಳ್ಳದಿರಲಿ ಅಂತ ಘಟ್ಟಿಯಾಗಿ ಕುಳಿತಿದ್ದೆ. ಅದು ಯಾವ ಗ್ಯಾಪಲ್ಲಿ ನನ್ನ ನೋಡಿದ್ಳೋ ನಂಗ ಗೊತ್ತಿಲ್ಲ ಸ್ವಾಮೀ, ಹಳೆಯ ಗೆಳೆಯರಲ್ವ ತನ್ನ ಆಭರಣಕ್ಕೆ ಇನ್ನಷ್ಟು ಮೆರಗನ್ನು ಕೊಟ್ಟು  ನನ್ಹತ್ರ ಓಡ ಬರತೊಡಗಿದಳು. ಅವಳು ಬರುವ ವೇಗ ನೋಡಿ ನನಗೆ ಗಾಬರಿಯಾಯಿತು .ನಾನು ಇದ್ದಕಿದ್ದಂತೆ ಕುರ್ಚಿಯಿಂದ ಎದ್ದು ಓಡತೊಡಗಿದೆ ,ಅವಳು ಬೆನ್ನಹತ್ತಿಬಿಡುವುದೆ . ಕಂಬಳ ಓಟದಂತೆ ಆಗಿತ್ತು ಅವಳ ಕೈಯಲ್ಲಿ ಬಾರಕೋಲು ಇರಲಿಲ್ಲನಷ್ಟೆ . ಮದುವೆಯ ಛತ್ರದಲ್ಲಿ ಚಿಕ್ಕ ಮಕ್ಕಳಹಾಗೆ ಓಡತೊಡಗಿದೆವು. ಛತ್ರವನ್ನು 2 ಬಾರಿ ಸುತ್ತಿದರು ಇಬ್ಬರು ಸೋಲಲಿಲ್ಲ . ಥಟ್ಟನೇ ಎಚ್ಚರಾಯಿತು ಎಲ್ಲಿ ಮಲಗಿದ್ದೆನೋ , ಅಲ್ಲಿಗೆ ಹೇಗಾದರು ಬಂದೇನೋ ತಿಳಿಯಲಿಲ್ಲ . ಸ್ನಾನ ಮಾಡಿ ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದೆ . ನಿನ್ನೆ ನನ್ನ ಬೆನ್ನುಹತ್ತಿದ್ದ ಆಕೆ ಪ್ರದಕ್ಷಿಣೆ ಹಾಕುವಾಗ ತನ್ನ ಪಾಲಕರೊಡಗೂಡಿ ಬಂದಾಗ ನನ್ನನ್ನು ನೋಡದೆ ಹಾಗೆಯೇ ಹೋಗಿ ಬಿಟ್ಟಳು. ಎಷ್ಟೋ ಆಡಬೇಕಾದ ಮಾತುಗಳು ಕೊಚ್ಚಿಹೋಗಿದ್ದವು. ಅವಳ ಈ ತಿರಸ್ಕಾರ ಅಸ್ತ್ರಕ್ಕೆ ನನ್ನ ಶಬ್ದಾಸ್ತ್ರಗಳು ಸೋತು ಹೋಗಿದ್ದವು. ನಾ ಹೇಳದ ಪದಗಳೇ ಅವಳಿಗೆ ತಿರಸ್ಕಾರದ ಅಸ್ತ್ರವಾಗಿದ್ದವು.


ಇದೆಲ್ಲವೂ ನಿಮ್ಮ ಮುಂದೆ ಹೇಳಲು ಮುಜುಗರವಾಗುತ್ತದೆ.ಆದ್ರೆ ನಾವು ಎಂದೋ  ಇಷ್ಟಪಟ್ಟ ವ್ಯಕ್ತಿ ಮತ್ತೆ ಕನಸಲ್ಲಿ ಬರ್ತಾರೆ ಅಂದ್ರೆ life is full of surprises & miracles ಅಂತ ಅನ್ನಸಲ್ವಾ?


ನೀವು ನಿಮ್ಮ ಕನಸನ್ನ ಓದಬೇಕು, ಬರೆಯಬೇಕು , ಬೆರಗಾಗಿ ಎಲ್ಲರಿಗೆ ಬೆಳಕಾಗಬೇಕು.


ಕೊನೆಯದಾಗಿ ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶಿರ್ವದಿಸಿ.🙏

ಸೋಮವಾರ, ಸೆಪ್ಟೆಂಬರ್ 7, 2020

ಹೀಗೊಂದು ಚಿಂತೆ

 

ಅವನಿಗೆ ಅವಳದೇ... ಚಿಂತೆ

ಇವಳಿಗೂ ಅವನದೇ...ಚಿಂತೆ,

ಈರ್ವರಿಗೂ ಮನೆಯಲ್ಲೇನೆಂಬುವರೆಂದು ಚಿಂತೆ
ಮನೆಯವರಿಗೋ.? ಲೋಕೋಪವಾದದ ಚಿಂತೆ.

ನನ್ನರಸಿ ರಾಧೆಗೆ ಅರಸನಾ..ಚಿಂತೆ
ನನಗೆ ನನ್ನ ಅರಸಿದ ರಾಧೆಯ ಚಿಂತೆ
ರಾಧೆಗೆ ನಾನಂದೆ ..ನಿನಗೆ ನಾ ಮನಸೋತೆ
ಬಿಡು ಕೃಷ್ಣ....ನಿನಗೆ ಕೇವಲ ಲಕ್ಷ್ಮೀಯ ಚಿಂತೆ

ಶುಕ್ರವಾರ, ಸೆಪ್ಟೆಂಬರ್ 4, 2020

ಅಮ್ಮ ತೋರಿಸುವ ಜಗದ ಯಾತ್ರೆ

 ಅಮ್ಮ ತೋರಿಸುವ ಜಗದ ಯಾತ್ರೆ.

ಅಜ್ಜ ಅಜ್ಜಿಯ ಹೇಳುವ ಕಥೆ ನೀವು ಕೇಳಿರಬಹುದು. ಮಕ್ಕಳಾಗಿದ್ದಾಗ ನಾವು ಅವನ್ನು ಕೇಳಿ ಆನಂದ ಪಟ್ಟಿದ್ದೇವೆ ನಿಜ. ಆದರೆ ಅಜ್ಜ ಅಜ್ಜಿ ಕಥೆ ಹೇಳ್ತಾರೆ ಅಷ್ಟೇ ಕೃತಿಯಲ್ಲಿ ಅವರ ಕಥೆಗಳನ್ನು ಕಾಣುವುದು ಕಡಿಮೆ.ಯಾಕಂದ್ರೆ ವಯಸ್ಸಾಗಿರ್ತದೆ, ಶುಗರು ಬಿಪಿ-ಪಾಪಿ ....ಅಂತ ರೋಗಗಳು ಬೇರೆ ಇರುತ್ತವೆ. ಹಾಗಾಗಿ ಅವರಿಂದ ನಾವು ಕೇಳಬಹುದಷ್ಟೆ.

ಶಬ್ದಗಳು ಪರಿಚಯವಾಗಿ ಅವನ್ನು ಮಸ್ತಕದಲ್ಲಿ ಹದ ಮಾಡಿ ಹಾಳೆಯ ಮೇಲೆ ಸಾಲು ಸಾಲಾಗಿ ಇಳಿಸುವ ತಿಳುವಳಿಕೆ ಬಂದಾಗ ನಾವು ಜಗವನ್ನ ತಿಳಿಯಲು ತಿಳಿದುಕೊಳ್ಳುತ್ತಾ ಮುಂದೆ ಸಾಗುತ್ತೇವೆ. ಹೀಗೆ ನಾನು ಕೂಡಾ ಸಾಗುತ್ತಾ ಯೋಚಿಸುತ್ತಿರುವಾಗ ನನಗೆ ಹೊಳೆದಿದ್ದೇ 'ಅಮ್ಮ ತೋರಿಸುವ ಜಗದ ಯಾತ್ರೆ' .


ನಮ್ಮೆಲ್ಲರ ಅಮ್ಮ ಕಥೆ ಹೇಳದಿರಬಹುದು ಆದರೆ ಕೃತಿಯಲ್ಲಿ ನಮಗೆ ತೋರಿಸುತ್ತಾಳೆ . ನಾವೆಲ್ಲರೂ ಈ ಜಗದಾ ಜೀವಯಾತ್ರೆ ಬರಿಯ ಮೂರೇ ದಿನ... ಅಂತ ಹಾಡಿನ ಮೂಲಕ,ಯಾರೋ ಬರೆದಿದ್ದನ್ನು ಓದಿ  , ಅಥವಾ ಅಜ್ಜ ಅಜ್ಜಿ ಹೇಳಿರುವ ಕಥೆಯಲ್ಲಿ ಕೇಳಿ ತಿಳಿದಿರಬಹುದು. ಆದರೆ ಅಮ್ಮ ಇದನ್ನ  ಪ್ರತ್ಯಕ್ಷವಾಗಿ ದಿನಾಲು ಮಾಡಿ ತೋರಿಸುವಳು. ಒಂದು ದಿನ ನಿಮ್ಮ ಕೆಲಸಗಳನ್ನು ಸ್ವಲ್ಪ ಹೊತ್ತು ಬದಿಗಿಟ್ಟು ಅಮ್ಮ ಚಪಾತಿ ಅಥವಾ ಭಕ್ರಿ(ರೊಟ್ಟಿ) ಮಾಡುವಾಗ ಅವಳ ಮುಂದೆ ಹೋಗಿ ಕುಳಿತುಕೊಳ್ಳಿ . ಅಮ್ಮನ ಎರಡು ಕೈಗಳನ್ನು ಸೃಷ್ಟಿಕರ್ತನ ಕೈ ಎಂದುಕೊಳ್ಳೋಣ ,ಅವಳ ಕೈಯಲ್ಲಿ ತಯಾರಾಗುವ ಚಪಾತಿ/ಭಕ್ರಿ ನಾವು ನೀವೆಂದುಕೊಳ್ಳೋಣ. ಮೊದಲು ಒಂದು ಪರಾತಿನಲ್ಲಿ ಹಿಟ್ಟನ್ನು ಹಾಕಿಕೊಂಡು ನೀರನ್ನು ಹಾಕಿ ಹದ ಬರುವವರೆಗೂ ನಾದುತ್ತಾಳೆ. ನಾದಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡುತ್ತಾಳೆ . ನಂತರ ಒಂದೊಂದರಂತೆ ಉಂಡೆಯನ್ನು ತೆಗೆದುಕೊಂಡು ಚಪಾತಿಯಾದರೆ ಲಟ್ಟಣಿಗೆಯಿಂದಲೋ ರೊಟ್ಟಿಯಾದರೆ ಕೈಯಿಂದಲೋ ತಟ್ಟುತ್ತಾಳೆ. ತಟ್ಟಿ ಗೋಲಾಕಾರದ ರೂಪದಲ್ಲಿ ಹಂಚಿನ ಮೇಲೆ ಹಾಕಿ ಬೇಯಿಸುತ್ತಾಳೆ . ಅಲ್ಲಲ್ಲಿ ಚಪಾತಿ /ರೊಟ್ಟಿಗೆ ಕಪ್ಪು ಚುಕ್ಕೆಗಳಿದ್ದರೇ ಅದು ಬೆಂದಿದೆ ಅಂತ ಅರ್ಥ , ಆಮೇಲೆ ಆ ಚಪಾತಿ/ ರೊಟ್ಟಿಗೆ ಪಲ್ಲೆಯೊಡನೆ ಬೆರೆಯುವ ಸಂಭ್ರಮ, ಆ ಪಲ್ಯೆಯ ಕಥೆ ಬೇರೆ. ಬೆರೆತಮೇಲೆ ತಿನ್ನುವವನ ಅರಿದು ರುಚಿಯ ಬಗೆ ತಿಳಿಸುವದು. ಇದು ಚಪಾತಿ /ರೊಟ್ಟಿಯ ಯಾತ್ರೆ.

ಈಗ ಮೊದಲೇ ಹೇಳಿದಂತೆ ಅಮ್ಮನ ಕೈಗಳು ಸೃಷ್ಚಿಕರ್ತನ ಕೈಗಳು ನಾವು ಸೃಷ್ಚಿಕರ್ತನ ಕೈಯಲ್ಲಿ ತಯಾರಾಗುವ ರೊಟ್ಟಿ /ಚಪಾತಿ . ಸೃಷ್ಟಿಕರ್ತ ನಮ್ಮನ್ನು ಚೆನ್ನಾಗಿ ನಾದಿ ಹದ ಮಾಡಿ ತಟ್ಟಿ ರೂಪ ಕೊಟ್ಟು ಬೇಯಿಸಿ ಈ ಭೂಮಿಗೆ ನಮ್ಮನ್ನು ಬಿಡುತ್ತಾನೆ. ಆ ಕಪ್ಪು ಚುಕ್ಕೆಗಳು ಅತಿಯಾಗಿ ಬೆಂದು ಕಲಿತ ಪಾಠಗಳಿರಬಹುದು/ ಎಲ್ಲರಲ್ಲಿ ದೋಷವಿರುವುದು ಸಹಜ ಎಂದು ತೋರಿಸುವದು, ಪಲ್ಯದೊಡನೆ ಬೆರೆಯುವ ಸಂಭ್ರಮವೆಂದರೆ ಅದೇ ಎಲ್ಲರಿಗೂ ಉಂಟು ಬ್ರಹ್ಮಗಂಟು ಎನ್ನುತ್ತಾರಲ್ಲಾ ಆ ಹೆಣ್ಣಿನೊಡನೆ ಬೆರೆಯುವ ಸಂಭ್ರಮ/ ಸ್ನೇಹಿತರೋ, ವಿದ್ಯಾವಂತರು ,topper's, ಸಂಗವಿರಬಹುದು ಅಥವಾ ಯಾವುದಾದರೂ ಇರಬಹುದು ಇವರೊಡನೆ ಬರೀ ಬೆರೆಯುವದಲ್ಲಾ , ಅರಿತು ಬೆರೆತು ಜೀವನಯಾತ್ರೆ ಮುಗಿದಾಗ ,ಹೇಗೆ ತಿನ್ನುವವ ಇದು ರುಚಿಯಿತ್ತೋ ಇಲ್ಲವೋ ಎಂದು ಹೇಳುತ್ತಾನೋ ಅದೇ ರೀತಿ ದೇವರು ನಮ್ಮ ಜೀವನದ ಫಲಿತಾಂಶ ತಿಳಿಸುತ್ತಾನೆ.

ಇದನ್ನೂ ನೀವೂ..ಗಮನಿಸಿರಬಹುದು , ನನ್ನ ಗಮನಕ್ಕೆ ಬಂದಿದ್ದರಿಂದ ಬರೇದಿದ್ದೇನೆ ಅಷ್ಟೇ. ಇದು ಅನಂತನ ಜಗತ್ತು ಇಲ್ಲಿ ತಿಳಿಯುವದು ಕೂಡ ಅನಂತವೇ.ಆದರೇ ಅನಂತನ ಸಾಮ್ರಾಜ್ಯದಲ್ಲಿ ಮನುಷ್ಯ ರೂಪದಲ್ಲಿ ನಮ್ಮದು ಅಲ್ಪಯಾತ್ರೆ. ಅದರಲ್ಲೂ ವಿಧ ವಿಧವಾದ ವಿಘ್ನಗಳು ಬರುವುದುಂಟು ಅವಗಳೊಂದಿಗೆ ಜೀವನ ನಡೆಸಿ ಬದುಕಿಗೊಂದು ಅರ್ಥ ಕೊಡಬೇಕು.
ಈ ಜಗದೊಳಗೆ ಅಮ್ಮ ಎಂಬ ಜಗತ್ತು ಇಟ್ಟು ಅಮ್ಮ ಎಂಬ ಜಗತ್ತು ತೋರಿಸುವ ಹತ್ತಾರು ಜಗತ್ತುಗಳು ಈ ಮುಗಿಯುವ ಜಗದೊಳಗೆ ಅನಂತ ಜಗಗಳು. ಈ ಅನೇಕ ಜಗಕ್ಕೆ ಅನಂತನೇ ನಮಗೆ 'ಬಾಳಿಗೊಂದು ನಂಬಿಕೆ' ಕೊಡುವವ. ಹೀಗೆ ನನ್ನಂತವರಿಗೆ ಬರೆಯಲು ಪ್ರೇರಿಸುವವ ಅವನೇ ..ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಬರಿ ಗೀಚು ಗೀಚು ಅಂತಾನೆ.

ಕಡೆಯದಾಗಿ ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶಿರ್ವದಿಸಿ.

-HRK💜

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...