ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ್ಗೆ ಪಿಸಿ ಪಿಸಿ ಮಾತುಗಳನ್ನಾಡೋದು, ಅವನ ಹುಡಗಿ ಅವನ ಪಕ್ಕ ಹೋದರೆ, ಅವಳ ಹುಡಗ ಅವಳನ್ನು ಮಾತನಾಡಿಸಿದಾಗ ಗೆಳೆಯ ಗೆಳತಿಯರ ಕುಹಕವಾಗಿ ಕೆಮ್ಮುವುದು. ಇದೇನು ಪದೇ ಪದೇ ಕುಹಕ ಕೆಮ್ಮು ಎನ್ನುತ್ತಿದ್ದೀರ ?ಅನ್ನಬೇಡಿ. ಅದನ್ನು ಇಲ್ಲಿ ಕೆಮ್ಮಿ ತೋರಿಸಲಾಗುವುದಿಲ್ಲ. ಅನುಭವಿಸಿದವರೆ ಒಂಥರಾ ಭಾಗ್ಯವಂತರು.
ಅಷ್ಷರಲ್ಲಿ ಒಬ್ಬಾಕೆ ತನ್ನ ಗೆಳತಿಯ ಮೊಣಕೈ ತಿವಿದು "ಲೇ ಕೆಮ್ ಲೆಕ್ಚಚರ್ ಬಂದ್ರು ' ಅಂದ್ಲು. ಏನಿದು ಕೆಮ್ ಅಂದ್ರೆ ? ಆಧುನಿಕರಿಗೆ ಎಲ್ಲವನ್ನು ಶಾರ್ಟ ಮಾಡುವುದು ಹಾಬಿ ಅಲ್ಲವೇ! ಅದಕ್ಕೆ Chemistry ಇಲ್ಲಿ Chem (ಕೆಮ್) ಆಗಿರೋದು. ತಿವಿಸಿಕೊಂಡಾಕೆ ಮೊಬೈಲ ಗುಂಗಿನಿಂದ ಹೊರಬಂದಿಲ್ಲ. ಲೆಕ್ಚರರ್ ಬಂದ್ದು ಜೋರಾಗಿ ಗಂಟಲು ಸರಿಮಾಡಿಕೊಳ್ಳುವ ರೀತಿಯಲ್ಲಿ ಕೆಮ್ಮಿದರು. ಆಗಲೂ ತಿವಿಸಿಕೊಂಡಾಕೆ ಮಾತ್ರ ತನ್ನ ಗುಂಗಿನಲ್ಲಿಯೇ ಇದ್ದಳು. ಏನು ಮಾಡೋದು ಲೆಕ್ಚರರ್ ದು ಹೈಡ್ರೋಜನ್ ಬಾಂಡ, ಕೋವೆಲಂಟ್ ಬಾಂಡಗಳ ಕೆಮಿಸ್ಟ್ರಿಯಾದರೆ ಗುಂಗಿನ ಹುಡುಗಿಯದು ಜೇಮ್ಸ ಬಾಂಡ ಮತ್ತು ಪ್ರೇಯಸಿಯ ಕೆಮಿಸ್ಟ್ರಿ . ಕ್ಲಾಸರೂಮಿನಲ್ಲಿ ಕಣ್ಣು ತಪ್ಪಿಸಿ ಚಾಟ ಮಾಡೋದೆ ಈರ್ವರ ಸಾಹಸಗಾಥೆ.
ಹರೆಯದ ಹುಡುಗಿಗೆ ಹರೆಯದ ಹುಡುಗ ಸಮಯ ಕೊಡಹತ್ತಿದರೆ ಮಾಸ್ತರನ ಕೆಮಿಸ್ಟ್ರಿ ಹರೆಯೇ ನಮಃ . ಕೆಮ್ಮ ಮಾಸ್ತರನ ಕೆಮ್ಮಿಗೆ ಎಚ್ಚೆತ್ತುಕೊಳ್ಳದವಳು , ಇನ್ನು ಮಾಸ್ತರ ಹೇಳುವ ಕೆಮ್ ಗೆ ಹೇಗೆ ಲಕ್ಷ್ಯ ಕೊಟ್ಟಾಳು? ಅಲ್ಲವೇ?
-Hrk💜
.jpeg)