ಎಂದೋ ನಡೆದ ಘಟನೆಗಳು ಮಿಕ್ಸಾಗಿ ಎಲ್ಲಿಯೋ ಯಾರಿಗೋ ಹೇಳಿದ ಮಾತುಗಳು ಸಿಂಕಾ(sink)ಗಿ ಕಾಣುವ ಅನುಭವವೇ ಕನಸು. ಈ ಕನಸು ಹೇಳಿ ಕೇಳಿ ಬರುವದಿಲ್ಲ , ಎಲ್ಲಿ ಆರಂಭವಾಯಿತೆನ್ನುವುದೇ ಅರ್ಥವಾಗುವುದಿಲ್ಲ , ಕನಸ್ಸಿನಲ್ಲಿ ನಾವು ಹಾಗೇ ಮಾತನಾಡುತ್ತೇವೆಯೆಂದು ನಮಗೆ ಊಹಿಸಲು ಆಗುವುದಿಲ್ಲ. ಆದರೆ ಮಲಗಿ ಎದ್ದಾಗ ಆ ಮಾತುಗಳು ನೆನಪಿಸಿಕೊಂಡಾಗ ಮೊಗದಲ್ಲಿ ನಗು ಚಿಮ್ಮುವುದು. ಅಂತಹುದೇ ಈ ಕನಸಿನ ಕಥೆ 'Aವಳು ಕನಸಲ್ಲಿ ಬಂದಾಗ.' ಮೇಲೆ ಹೇಳಿದಂತೆ ಈ ಕನಸು ಎಲ್ಲಿಂದ ಆರಂಭವಾಗವುದೋ ಎಂಬುದು ತಿಳಿಯದು...ಅದರಂತೆಯೇ ನಾನು ಯಾವುದೋ ಶಾಲೆಯಲ್ಲಿ ಇಂಗ್ಲೀಷ ಪ್ರಶ್ನೆ ಪತ್ರಕೆ ಬಿಡಿಸುತಿದ್ದೆ. ಯಾವ ಕ್ಲಾಸಿನ ಪೇಪರೋ, ಯಾರು ಸೂಪರವೈಜರೋ ,ನನ್ನ ಪಕ್ಕ ಯಾರು ಇದ್ದರೋ ಎಂಬುದು ಗೊತ್ತಿಲ್ಲ. ದೊಡ್ಡ ಪರೀಕ್ಷೆಯಂತೆ ನನಗೆ ಭಾಸವಾಗುತ್ತಿತ್ತು .ಏನು ಓದದೇ ಇರುವ ನಾನು ಬರೆಯಲು ಪೇಚಾಡುತ್ತಿದ್ದೆ, ಭಯವು ಆವರಿಸಿತ್ತು, ಫೇಲಾದರೆ ಮುಂದೇನು ಗತಿಯೆಂದು ದಿಗಿಲಾಗಿತ್ತು. ಮುಂದಿನವನ ಉತ್ತರ ನೋಡಿ ಬರೆಯಬೇಕೆಂದು ಅವನ ಬೆನ್ನು ತಟ್ಟಿದೆ ,ಅವನು ಯಾರೆಂದು ನನಗೂ ಗೊತ್ತಿಲ್ಲ ..ಕನಸಲ್ವ ಹೇಗೆ ಗೊತ್ತಾಗುತ್ತೇ ಹೇಳಿ? ಅವನು ಉತ್ತರ ಪತ್ರಿಕೆ ಸರಸಿದ ನೋಡಿ ಬರೆಯಲು ಪ್ರಾರಂಭ ಮಾಡಿದ್ದೆ ತಡ 'ಠಣ' ಎಂಬ ಶಬ್ದ ಕಿವಿಗೆ ಬಿತ್ತು ಪರೀಕ್ಷೆ ಸಮಯ ಮೀರಿತ್ತು. ಸಿಟ್ಟಿನಿಂದ ನನ್ನ ಉತ್ತರ ಪತ್ರಿಕೆಯನ್ನು ರಪ್ ಅಂತ ಡೆಸ್ಕ ಮೇಲೆ ಬಡಿದೆ. ಸಿಟ್ಟು ಮುಖದಲ್ಲಿ ಆವರಿಸಿತ್ತು, ಫೇಲಾದರೆ ಮುಖ ಹೇಗೆ ತೋರಿಸಲಿ ಎಂಬ ಭಯವು ಇತ್ತು. ಪರೀಕ್ಷಾ ಕೋಠಡಿಯಿಂದ ನಾ ಹೊರ ನಡೆದೆ. ನನ್ನ ಕ್ಲಾಸಮೇಟ ಒಬ್ಬರು ಬಂದು 'A' ಅವಳು ಎಲ್ಲರಿಗೂ ಮೀಟಿಂಗ ಕರೆದಿದ್ದಾಳೆ ಎಂದನು. ಅವನೂ ಯಾರೆಂದು ನನಗೆ ಗೊತ್ತಿಲ್ಲ . ಒಲ್ಲದ ಮನಸ್ಸಿನಿಂದಲೇ ಹೋದೆ, ಹೇಳಿಕೇಳಿ ಲೀಡರ್ ಅಲ್ವಾ ಅವಳು ಎತ್ತರದ ಸ್ಥಳದಲ್ಲಿ ನಿಂತಿದ್ದಳು. ಸಾಮಾನ್ಯವಾಗಿ ಟಾಪರ್ಸಗಳ ನಾನು ಕಾಲೆಳೆವುದುಂಟು ಆದರೆ ಅಂದು ಮಾತ್ರ ಮಾಡಲಿಲ್ಲ ಆಶ್ಚರ್ಯ!, ನಾನು ಏನೋ ದೊಡ್ಡ ಸಾಹಿತಿಯಂತೆ ಕೈಯಲ್ಲಿ ಪೆನ್ನು ಹಿಡಿದು ಗದ್ದಕ್ಕೆ ಕೈಯನ್ನ ಅಂಟಿಸಿಕೊಂಡು ಕುರ್ಚಿಯ ಮೇಲೆ ಕೂತೆ. ಅವಳು ಎತ್ತರದ ಸ್ಥಳದಲ್ಲಿ ಏನೋ ಪ್ರಾಜೆಕ್ಟ ಬಗ್ಗೆ ವಿವರಣೆ ಕೊಡುತ್ತಿದ್ದಳು. ನನಗಂತೂ ಒಂಚೂರು ಅರ್ಥ ಆಗಲಿಲ್ಲ. ಉಳಿದವರಿಗೆ ಅರ್ಥ ಆಯ್ತಿಲ್ಲೋ ನಂಗ ಗೊತ್ತಿಲ್ಲ. ಏನೇನೋ ವಿವರಣೆ ಕೊಟ್ಟಳು ನಾನು ಸುಮ್ಮನೆ ಅರ್ಥವಾಗುವಂತೆ ತೋರುತ್ತಾ ಕೂತಿದ್ದೆ. ಅಂತು ಇಂತೂ ಹೇಳಿ ಮುಗಿಸಿದಳು. ಕೊನೆಗೆ ಯಾರಿಗೆ ಇದು ತಿಳಿದಿದೆ ? ಎಷ್ಟು ಜವ ನನ್ನೊಂದಿಗೆ ಈ ಪ್ರಾಜೆಕ್ಟ ಮಾಡಲು ಯಾರು ಕೈ ಜೋಡಿಸುತ್ತೀರಿ ಎಂದಳು?
ತರಗತಿಯಲ್ಲಿನ ಅರ್ಧ ಜನ ಕೈ ಎತ್ತಿದರು , ಇದರಲ್ಲಿ ಅರ್ಧ ಜನ ಪ್ರಾಜೆಟ್ಕ ಬಗ್ಗೆ ತಿಳಿಯದವರು ಕೈ ಎತ್ತಿದ್ದರು. ನಾನು ಕೈ ಎತ್ತದೇ ಇವರೆಲ್ಲರನ್ನ ನೋಡುತ್ತಾ ಕುಳಿತಿದ್ದೆ. ಅವಳು ಎಲ್ಲರನ್ನು ನೋಡುತ್ತಾ ಸಾಹಿತಿಯಂತೆ ಪೆನ್ನನ್ನು ಹಿಡಿದು ಕುಳಿತಿರುವ ನನ್ನತ್ತ ನೋಡಿದಳು. ನಾನು ಊಹಿಸಿರದ ಪ್ರಶ್ನೆಯೊಂದು ನನ್ನಡೆಗೆ ಹಾರಿ ಬಂತು. ಸಾಮನ್ಯವಾಗಿ ನಿಮಗೆಲ್ಲರಿಗೆ ತಿಳಿದಿರುವಂತೆ ನಾನು ಮಿತ ಭಾಷಿ , ಆದರೆ ಯಾರಾದರೂ ಏನಾದ್ರು ಕೇಳಿದರೆ ಸಾಕು ಆ ವಿಷಯದ ಬಗ್ಗೆ ನನಗೆ ಅರಿವಿದ್ದರೆ ಕೇಳಿದವರೆ ಸಾಕೆನ್ನಬೇಕು ಅಲ್ಲಿಯವರೆಗೆ ಮಾತನಾಡುತ್ತೇನೆ. ಅವಳ ಪ್ರಶ್ನೆ ನಿಮ್ಮ ಅಭಿಪ್ರಾಯ ನನ್ನ ಪ್ರಾಜೆಕ್ಟ ಬಗ್ಗೆ ಎಂದು ಕೇಳಿ ಬಿಡುವುದೇ!!? ಕೆಲ ಕ್ಷಣ ನನಗೆ ಆಶ್ಚರ್ಯ ಉಂಟು ಮಾಡಿತ್ತು ಪ್ರಶ್ನೆ ಕೇಳಿದಕ್ಕಲ್ಲ ,ಈ ಪ್ರಶ್ನೆಗೆ ನಾನು ಉತ್ತರಿಸಲು ಅರ್ಹನೆಂದು ಅವಳಿಗೆ ಹೇಗಾದರು ಅನ್ನಿಸಿತ್ತೋ? ಎಂದು. ಅವಳ ಕಣ್ಣು ನನ್ನನ್ನೇ ನೋಡುತ್ತಿತ್ತು ಇವನು ಏನು ಹೇಳಿಯಾನು ಎಂದು ! ಅಂದು ನೋಡಿದ ಕಣ್ಣುಗಳು ಇವತ್ತಿಗೂ ಮರೆಯದೇ ನನ್ನಲ್ಲಿ ಅಚ್ಚೊತ್ತಿವೆ. ಅಲ್ಪ ಸ್ವಲ್ಪ ತಿಳಿದವನಾದದ್ದರಿಂದ ಹೇಳಲು ಶುರು ಮಾಡಿದೆ . ಪ್ರಾಜೆಕ್ಟ ಬಗ್ಗೆ ನಿನಗೊಬ್ಬಳಿಗೆ ತಿಳಿದರೆ ಸಾಲದು ಅದಕ್ಕೆ ಚೆನ್ನಾಗಿ ವಿವರಣೆ ಕೊಡಬೇಕಿತ್ತು ಎಂದೆ.ನನ್ನ ಮೊದಲ ಮಾತೇ ಸ್ವಲ್ಪ ಕಠೋರವಾಗಿತ್ತು ಎಂದು ನನಗನ್ನಿಸಿತು.ಆದರೆ ಅವಳ ಮುಖದಲ್ಲಿ ಯಾವ ಬದಲಾವಣೆಯಿರಲಿಲ್ಲ ಅದೇ ನೋಟ , ತನ್ನೆರಡು ಅಕ್ಷಿಗಳಿಂದ ದಿಟ್ಟಿಸಿ ನೋಡುತಿದ್ದಳು. ದೊಡ್ಡ ವ್ಯಕ್ತಿಗಳು 1-2 ಮಾತುಗಳಲ್ಲಿ ಜನರನ್ನ ಆಕರ್ಷಿಸುವುದುಂಟು...ನಾನು ಏರಡನೇ ಮಾತು ಆಡಿದಾಗ ಆಕೆಗೆ ಹಾಗೇಯೇ ಅನ್ನಿಸಿತು. ನಾನು ಒಂಚೂರು ಏರು ದನಿಯಲ್ಲಿ ನೀನು ಪ್ರಾಜೆಕ್ಟ ಮಾಡ್ತೀಯ ಅನ್ನೋದೇನೋ ಸರಿ ,ಆದರೆ ನೀನು ಟಾಪರ್ ಎಂದ ಮಾತ್ರಕ್ಕೆ ನೀನು ಹೇಳಿದ್ದೆ ಮಾಡಬೇಕು ಎಂದೇನಿಲ್ಲ. ಅಂದ್ರೆ ನೀನು ಆರ್ಡರ(ಗೈಡ್) ಮಾತ್ರ ಮಾಡೋದು ಉಳಿದವರು ಪ್ರಾಜೆಕ್ಟ ಕೆಲಸ ಮಾಡೋದು ಇದ್ಹೇಗ ಸರಿ ....!? ನೀನು ಕೂಡ ಅವರಲ್ಲಿ ಒಬ್ಬಳಾಗಿ ಮಾಡು ಎಂದೆ. ಇಷ್ಟೇ ಸ್ವಾಮಿ ಇಷ್ಟೇ...ನಾನು ಹೇಳಿದ್ದು ಅವಳು ಬಯ್ಯುವಳೆಂದು ನಾನೆಂದುಕೊಂಡೆ ಆದ್ರೆ ಅವಳ ನೋಡುವು ನೋಟದಲ್ಲಿ ಬದಲಾಗದ ಬದಲಾವಣೆಯಿತ್ತು. ಪ್ರೀತಿ ತುಂಬಿತ್ತು ನೋಟದಲ್ಲಿ . ನಮ್ಮಿಬ್ಬರ ನೋಟ ಒಂದಾಗಿತ್ತು, ,ಇನ್ನೊಂದು ಕ್ಷಣದಲ್ಲಿ ಬ್ಯಾಕಬೆಂಚರ್ ಆಗಿದ್ದ ನಾನು ಅವಳ ಪ್ರಾಜೆಕ್ಟ ತಂಡದಲ್ಲಿ ಒಬ್ಬನಾಗಿದ್ದೆ. Aವಳಿಗೆ ಇದು ಮುಟ್ಟದು . ಇದನ್ನ ಹೇಳಬೇಕೋ ಹೇಳಬಾರದೋ ಸಂಕೋಚ ಎದುರಾಗಿತ್ತು. ಓದಿದವರ ಅಭಿಪ್ರಾಯ ಭಿನ್ನ, ಮುಖದಲ್ಲಿ ಕೊಂಚ ಬದಲಾವಣೆ ,ಮನಕ್ಕೆ ದು:ಖವಾಗಬಹುದು.
ಆದ್ರೇ ಎಂದಿಗೂ ಇಷ್ಟು ಟೈಪ ಮಾಡಿದವನೆ ಅಲ್ಲ ನಾನು. ಇಂದೇನಾಯಿತೋ ಗೊತ್ತಿಲ್ಲ ! ಬರೆದೆ ಬರೀತಾ ಹೋದೆ .ಬರೆಸಿದವನು ಪ್ರೇರುಸಿದವನು ಬೇರ್ಯಾರು ಅಲ್ಲ ಅವನೇ 'ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ' ಬರೆ ಗೀಚು ಗೀಚೂ ಅಂತಾನೆ'.
-Hrk💜