ಎಲ್ಲಿ ಹುಟ್ಟಿತೋ ? ಹೇಗೆ ಆರಂಭವಾಯಿತೋ? ಗೊತ್ತಿಲ್ಲ . ಗೊತ್ತಿಲ್ಲದ ಲೋಕದಲ್ಲಿ ಅನುಭವಿಸುತ್ತಾ ತೇಲುತ್ತಿದ್ದೆ . ಹಿಂದಿನಂತೆಯೇ ಕನಸು ಬಿದ್ದರೂ ಈ ಕಂಡ ಕನಸಲ್ಲಿ ಅಷ್ಟು Concentrate ಮಾಡಲಿಲ್ಲ.
ಅದಕ್ಕೇನೆ ಪ್ರಾರಂಭದಲ್ಲಿ ಹಾಗೆ ಹೇಳಿದ್ದು. ಸಾಮಾನ್ಯವಾಗಿ ಎಲ್ಲರ ಕನಸು ಇದೇ ರೀತಿ ಆರಂಭವಾಗುವುದು.ಹುಟ್ಟುವದು ಎಲ್ಲೆಯೋ ,ಮುಗಿಯುವದೋ ಎಲ್ಲೆಯೋ ಆದ್ರೆ ಕಾಣುವದು ಮಾತ್ರ ಬಿಟ್ಟಿಲ್ಲ.
ಸಾಮಾನ್ಯವಾಗಿ ಹುಡುಗರ ಕನಸಲ್ಲಿ ಅವರ ಹಳೇ ಪ್ರೇಯಸಿಯೋ, ಅಥವಾ ಈಗಿನ ಜಮಾನಾ ರೀತಿಯೊಳಗ ಹೇಳಬೇಕಂದ್ರ ಕ್ರಷ್ . ಈಗಿನ Bae ಅಥವಾ ಹಿಡಿಂbae ಕ್ರಷ್ ಆಗಿ ಕನಸಲ್ಲಿ ಬಂದಾಗ ಎದೆ ಬಡಿತ ವೇಗವಾಗಿ ಬಡಿದುಕೊಳ್ಳುತ್ತದೆ. ಮನದಲ್ಲಿ ಅವಳನ್ನು ಭೇಟಿಯಾಗಬೇಕು, ಹಳೆಯ ನೆನಪನ್ನ ಮತ್ತೆ ಮೆಲಕು ಹಾಕಬೇಕು ಅಂತೆಲ್ಲಾ ಅನಿಸುತ್ತದೆ. ಹಾಗೆಯೇ ನನ್ನ ಕನಸಲ್ಲಿ ಬಂದ ಚೆಂದುಳ್ಳಿ ಚೆಲುವೆ ಕಚ್ಚೆ ಸೀರೆಯನುಟ್ಟು ಮದುವೆಯ ಮನೆಯಲ್ಲಿ ಒಡಾಡುತ್ತಿದ್ದಳು. ಇದರ ಮೇಲೆ ಉದ್ದು ಕುಂಕುಮ ಮತ್ತು ಪಿಳಿಪಿಳಿಸುವ ಕಣ್ಣಿಗೆ ಗುಂಡು ಗಾಜಿನ ಕನ್ನಡಕ . ಹಿಂದೆ ಹೆಣ್ಣು ಕನ್ನಡಕ ಧರಿಸಿದರೆ ಗಂಡಿನ ಕಡೆಯವರು ರಿಜೆಕ್ಟ ಮಾಡುವ ಕಾಲವಿತ್ತು .ಈಗ ಅದು ಹೋಗಿದೆ ಕನ್ನಡಕ ಧರಿಸುವ ಹೆಣ್ಣನ್ನು ಕೈ ತೊಳೆದು ಮುಟ್ಟಬೇಕು. ಒಮ್ಮೆ ಅನುಪಮಾ ಪರಮೇಶ್ವರನ್ ಕನ್ನಡಕ ಹಾಕಿರುವದನ್ನು ಗಮನಿಸಿ. ಹಾಗೆಯೇ ನಮ್ಮ ಕನ್ನಡತಿಗೆ ಕನ್ನಡಕವೇ ಭೂಷಣ ಮತ್ತು ಎಲ್ಲ ಆಭರಣಗಳನ್ನು ಮೀರಿಸುವ ನಗುವೆಂಬ ಆಭರಣ ತೊಟ್ಟು ಓಡಾಡುತ್ತಿದ್ದಳು. ದೇವರಾಣೆಗೂ ಅದು ಯಾರ ಮದುವೆಯಂತ ಅವಳಿಗೂ ಗೊತ್ತಿಲ್ಲ ನಂಗೂ ಗೊತ್ತಿಲ್ಲ. ಅಂತು ಇಂತು ನಾನು ಮದುವೆ ಮನೆ ತಲುಪಿದೆ . ಸುಮ್ಮನೆ ಕುಳಿತಿದ್ದೇ ,ಸಾಮಾನ್ಯವಾಗಿ ಮಹಿಳೆಯರು ಹೆಣ್ಣು ಮಕ್ಕಳು ಮದುವೆ ಮನೇಲಿ ಜಾಸ್ತಿ ಓಡಾಡೋದು ,ನಾವು ಹುಡುಗರೋ ಚೇರಗಳನ್ನ ಜೋಡಸೋದು ಬಿಡಿಸಿಡೋದ್ರಲ್ಲಿ ಇರ್ತೇವೆ ,ಹಾಗಾಗಿ ನನ್ನ ಚೇರ್ ಯಾರು ತೆಗೆದುಕೊಳ್ಳದಿರಲಿ ಅಂತ ಘಟ್ಟಿಯಾಗಿ ಕುಳಿತಿದ್ದೆ. ಅದು ಯಾವ ಗ್ಯಾಪಲ್ಲಿ ನನ್ನ ನೋಡಿದ್ಳೋ ನಂಗ ಗೊತ್ತಿಲ್ಲ ಸ್ವಾಮೀ, ಹಳೆಯ ಗೆಳೆಯರಲ್ವ ತನ್ನ ಆಭರಣಕ್ಕೆ ಇನ್ನಷ್ಟು ಮೆರಗನ್ನು ಕೊಟ್ಟು ನನ್ಹತ್ರ ಓಡ ಬರತೊಡಗಿದಳು. ಅವಳು ಬರುವ ವೇಗ ನೋಡಿ ನನಗೆ ಗಾಬರಿಯಾಯಿತು .ನಾನು ಇದ್ದಕಿದ್ದಂತೆ ಕುರ್ಚಿಯಿಂದ ಎದ್ದು ಓಡತೊಡಗಿದೆ ,ಅವಳು ಬೆನ್ನಹತ್ತಿಬಿಡುವುದೆ . ಕಂಬಳ ಓಟದಂತೆ ಆಗಿತ್ತು ಅವಳ ಕೈಯಲ್ಲಿ ಬಾರಕೋಲು ಇರಲಿಲ್ಲನಷ್ಟೆ . ಮದುವೆಯ ಛತ್ರದಲ್ಲಿ ಚಿಕ್ಕ ಮಕ್ಕಳಹಾಗೆ ಓಡತೊಡಗಿದೆವು. ಛತ್ರವನ್ನು 2 ಬಾರಿ ಸುತ್ತಿದರು ಇಬ್ಬರು ಸೋಲಲಿಲ್ಲ . ಥಟ್ಟನೇ ಎಚ್ಚರಾಯಿತು ಎಲ್ಲಿ ಮಲಗಿದ್ದೆನೋ , ಅಲ್ಲಿಗೆ ಹೇಗಾದರು ಬಂದೇನೋ ತಿಳಿಯಲಿಲ್ಲ . ಸ್ನಾನ ಮಾಡಿ ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದೆ . ನಿನ್ನೆ ನನ್ನ ಬೆನ್ನುಹತ್ತಿದ್ದ ಆಕೆ ಪ್ರದಕ್ಷಿಣೆ ಹಾಕುವಾಗ ತನ್ನ ಪಾಲಕರೊಡಗೂಡಿ ಬಂದಾಗ ನನ್ನನ್ನು ನೋಡದೆ ಹಾಗೆಯೇ ಹೋಗಿ ಬಿಟ್ಟಳು. ಎಷ್ಟೋ ಆಡಬೇಕಾದ ಮಾತುಗಳು ಕೊಚ್ಚಿಹೋಗಿದ್ದವು. ಅವಳ ಈ ತಿರಸ್ಕಾರ ಅಸ್ತ್ರಕ್ಕೆ ನನ್ನ ಶಬ್ದಾಸ್ತ್ರಗಳು ಸೋತು ಹೋಗಿದ್ದವು. ನಾ ಹೇಳದ ಪದಗಳೇ ಅವಳಿಗೆ ತಿರಸ್ಕಾರದ ಅಸ್ತ್ರವಾಗಿದ್ದವು.
ಇದೆಲ್ಲವೂ ನಿಮ್ಮ ಮುಂದೆ ಹೇಳಲು ಮುಜುಗರವಾಗುತ್ತದೆ.ಆದ್ರೆ ನಾವು ಎಂದೋ ಇಷ್ಟಪಟ್ಟ ವ್ಯಕ್ತಿ ಮತ್ತೆ ಕನಸಲ್ಲಿ ಬರ್ತಾರೆ ಅಂದ್ರೆ life is full of surprises & miracles ಅಂತ ಅನ್ನಸಲ್ವಾ?
ನೀವು ನಿಮ್ಮ ಕನಸನ್ನ ಓದಬೇಕು, ಬರೆಯಬೇಕು , ಬೆರಗಾಗಿ ಎಲ್ಲರಿಗೆ ಬೆಳಕಾಗಬೇಕು.
ಕೊನೆಯದಾಗಿ ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶಿರ್ವದಿಸಿ.🙏
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ