ಹುಣ್ಣಿಮೆಯ ರಾತ್ರಿಯಲಿ
ಚೆಲುವ ಚಂದ್ರನೆದುರು
ಹರಡಿರುವ ಚೆಂದೋಟದಿ
ಶಶಿಕಾಂತನೊಡಗೂಡಿ
ನಗುತ ಚೆಂಡೂವಿನಿಂದ
ಇರುಳುರಾಯನ ಕನ್ನಿಕೆಯಾದ
......ಚಂದ್ರಿಕೆ !!
ಚೆಂಡಾಟವಾಡುತಿರುವೆಯಾ ?
ಸಾಕಿನ್ನು ಚೆಂಡಾಟವೆಂದು ,
ಚೆಂದದೂಟಕ್ಕೆ ಶಶಿ ಸೋದರಿಯ ಕರೆಯುತಿರಲು,
ಭ್ರಾತೃು ಭಾಸ್ಕರನು ಬರುವವರೆಗೆ
ಆಡುವೆನೆಂದು ಚೆಂಡಾಟ ಮುಂದುವರೆಸಿದಳು ಚಂದ್ರಮುಖಿ.
ಸಾಕಿವಳ ಹುಡುಗಾಟ ,ಮಾಡಿರಿ ಹುಡುಗನ ಹುಡಕಾಟ ಎಂದು ಚಂದ್ರಕಾಂತಳು ಹಲಬುತ್ತಿರೆ ,
ಇರುಳುರಾಯನ ಮಗನೊಂದಿಗೆ ನಸುನಕ್ಕಳು ಶಶಿವದನೆ.
-HRK
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ