ತಾಳಿ
ಹುಡುಗಿ ನಮ್ಮಕಡೆಯವಳು ,ವರ ಕರಾವಳಿ ಭಾಗದವ
.ತಾವೇ ತಿಳಿಸಿದ ಶುಭ ಮಹೂರ್ತದಲ್ಲಿ ವಿವಾಹ ಕಾರ್ಯ ನೆರವೇರಿಸುತ್ತಿದ್ದಾರೆ ಪುರೋಹಿತರು.ಎಲ್ಲ ಸ್ತ್ರೀಯರು
ಮಂಗಳಸೂತ್ರವನ್ನ ಸ್ಪರ್ಶಿಸಿ ʼಅಖಂಡ ಸೌಭಾಗ್ಯವತಿಯಾಗಲಿ ಎಂದು ಹರಸುತ್ತ ವರನ ಕೈಗೆ ಮಾಂಗಲ್ಯವಿತ್ತರು.ಪುರೋಹಿತರು
ಕಣ್ಣು ಮುಚ್ಚಿ ಮಂತ್ರ ಹೇಳುತ್ತಾ ʼತಾಳಿʼ ಎಂದರಂತೆ. ಪುರೋಹಿತರು ʼಮಾಂಗಲ್ಯಂತಂತುನಾನೇನ...ಅಂತ ಮಂತ್ರ ಉಚ್ಚರಿಸತೊಡಗಿದರು ,ಹೊರಗಡೆ ತಾಳಮೇಳಗಳ
ನಾದ. ಆದರೆ ವರ ಮಾತ್ರ ಮಂಗಳಸೂತ್ರ ವಧುವಿಗೆ ಕಟ್ಟುತ್ತಿಲ್ಲ.
ಎಲ್ಲರಿಗೂ ಚಿಂತೆ ಆಶ್ಚರ್ಯ ಏಕಕಾಲಕ್ಕೆ
ಆಗತೊಡಗಿತು.ಕೆಲವರು ಹುಡುಗನಿಗೆ ಬಹುಶಃ ಮದುವೆ ಇಷ್ಟವಿಲ್ಲ ಅಂತ ಕಾಣುತ್ತೆ. ವರೋಪಚಾರ ಸರಿಯಾಗಿ ಮಾಡಿಲ್ಲ
ಅಂತ ಕಾಣುತ್ತೆ ಅದಕ್ಕೆ ತಾಳಿ ಕಟ್ಟುತ್ತಿಲ್ಲರಿ ಪದ್ಮಾ ವೈನ್ಸಾ ಅಂತ ಮೂಲ್ಯಾಗ ಕುತ್ತಿದ್ದ ಸಂಧ್ಯಾ
ವೈನಿ ಅಂದ್ಲು.ವಧುಗಂತೂ ಎಲ್ಲಾ ಬರೋಬ್ಬರಿ ಇತ್ತಲಾ ಏನಾತ ಇವರಿಗೆ ? ಲೌ ಮಾಡಲಿಕ್ಕೆ ಸಾಧ್ಯನೇ ಇಲ್ಲ
ನಾ ಬಿದ್ದಿದ್ದ ದೊಡ್ಡದಿವರಿಗೆ (ಐ ಮೀನ್ ನಾ ಸಿಕ್ಕಿದ್ದ ದೊಡ್ಡದು).ಅಕಿನು ಚಿಂತಿ ಮಾಡಲೆಕತ್ತಿದ್ದಲು.
ಕನ್ಯಾ ಅಲ ಸೋ ಗಾಂಭಿರ್ಯತೆ ಕಾಪಾಡಕೋಬೇಕಂತ ಸುಮ್ಮನಿದ್ದಲು.ಮದುವೆ ಭಾರ ಹೊತ್ತಿದ್ದ ವಧುವಿನ ಅಣ್ಣ
ತಮ್ಮ ಇಬ್ಬರಿಗೂ ಮರ್ಯಾದೆ ಸರಿಯಾಗಿಲ್ಲಂತ ಕಾಣತದ ಅದಕ ಇವರು ಮಂಗಳಸೂತ್ರ ಕಟ್ಟವಲ್ಲರು ತಡಿರಿ ಹೋಗೆ
ಕ್ಷಮೆ ಕೇಳೂನ ಅಂತ ವರನ ತಂದೆ ಕಡೆ ಹೋಗಿ ಕೇಳಿದ್ರು ಅವರು ಏನಿಲ್ಲರಿ ಎಲ್ಲಾ ಬರೋಬ್ಬರಿ ಛೊಲೋ ಮಾಡಿರಿ
. ಆದರೆ ನನ್ನ ಮಗನೇಕೋ ಮಂಗಳಸೂತ್ರ ಕಟ್ಟುತ್ತಿಲ್ಲ
ಎಂಬುದು ನನಗೂ ಅರ್ಥವಾಗುತ್ತಿಲ್ಲ ತಡೆಯಿರಿ ಕೇಳುತ್ತೇನೆ ಅನ್ನುವಷ್ಟರಲ್ಲಿ .ವಧುವಿನ ಪಕ್ಕದಲ್ಲೇ
ನಿಂತಿದ್ದ ಕಳಸಗಿತ್ತಿ ಚಿಂತಾಮಣಿಗೆ ತನ್ನ ಜೀರಗಿಗಂಟ ಕದ್ದರೊಕ್ಕ ಎಲ್ಲೆ ಕೈತಪ್ಪಿ ಹೋಗ್ತದಂತ ಚಿಂತಿ
ಮಾಡ್ಕೋತ ಜೋರಾಗಿ “ಈ ಪುರೋಹಿತರು ಶಾಸ್ತ್ರ ಸರಿಯಾಗಿ ಮಾಡಿಸಿಲ್ಲ ಅದಕ್ಕೆ ಅವರು ಮಾಂಗಲ್ಯ ಕಟ್ಟುತ್ತಿಲ್ಲ”
ಎಂದು ಬಿಡೋದೆ!. ಅಲ್ಲಿಯವರೆಗೆ ಸುಮ್ಮನೆ ಕುತ್ತಿದ್ದ ಪುರೋಹಿತರಿಗೆ ಸಿಟ್ಟು ಆವರಿಸಿತು ʼ ಏನಮ್ಮ ನೀನು ಇಲ್ಲಿಯವರೆಗೆ ನೂರಾರು
ಮದುವೆಗಳನ ಮಾಡಿದೇನೆ ಯಾರು ಹೀಗಂದಿರಲಿಲ್ಲʼ ಎನ್ನುತ್ತಾ ವರನ ಕಡೆ ತಿರುಗುತ್ತಾ ಏನಯ್ಯಾ ನಿನ್ನ ಪ್ರಾಬ್ಲಮ್ ಯಾಕ ಕಟ್ಟತಾ
ಇಲ್ಲ ಮಾಂಗಲ್ಯನ? ಕೇಳಿದರು .
ಎಲ್ಲರೂ ಒಂದು ಕ್ಷಣ ಮೌನ. ಎಲ್ಲರೂ ವರನ ಕಡೆಯೆ ನೋಡುತ್ತಿದ್ದಾರೆ.ಆಗ
ವರ ಅಲ್ಲಾ ಪುರೋಹಿತರೆ ಎಲ್ಲವೂ ಗೊತ್ತಿದ್ದು ನೀವೇ ಹೀಗೆ ಕೇಳುತ್ತಿದ್ದಿರಲ್ಲ ಎಂದ. ನಾನೇನಯ್ಯ ಮಾಡಿದೆ
? ನನಗೇನು ಗೊತ್ತು ಎಂದರು ಪುರೋಹಿತರು. ವರ “ತಾಳಿ ಅಂತೀರಿ ಮಾಂಗಲ್ಯಧಾರಣ ಮಂತ್ರನೂ ಅಂತೀರಿ,ತಾಳಿ
ಅಂತೀರಿ ಮಾಂಗಲ್ಯಧಾರಣ ಮಂತ್ರನೂ ಅಂತೀರಿ!! ಹೀಗಾದ್ರೆ ನಾ ಹೇಗೆ ಮಂಗಳಸೂತ್ರ ಕಟ್ಟೋದು?? ಹೇಳಿ ನೋಡೋಣ.
ಅಲ್ಲಿಯವರೆಗೆ ಗಾಂಭಿರ್ಯತೆಯಿಂದ ಕೂತಿದ್ದ ವಧು ಘೊಳ್ಳೆಂದು ನಗತೊಡಗಿದಳು.ಪುರೋಹಿತರು ಹಣಿ ಹಣಿ ಚಚ್ಚಿಕೊಂಡರು.ಅಲ್ಲಿದ್ದವರಿಗೆ
ನಗಬೇಕೋ ಅಳಬೇಕೋ ಅಂತ ಗೊತ್ತಾಗಲಿಲ್ಲ . ಪುರೋಹಿತರು ಸರಿ ನಂದೇ ತಪ್ಪು ಮಹರಾಯ ಸರಿ ಈಗ ತಾಳಿ ಕಟ್ಟು
ಮತ್ತೆ ಹಣೆ ಚಚ್ಚಿಕೊಳ್ಳುತ್ತಾ ಅಲ್ಲಲ್ಲಾ ಮಂಗಳಸೂತ್ರ ಕಟ್ಟು ಮಹರಾಯ ಅನ್ನುತ್ತಾ ಮಾಂಗಲ್ಯ ಕಟ್ಟಿಸಿದರು.
ವಧುವಿಗ ಮಾತ್ರ ನಗು ಎಲ್ಲೂ ನಿಲ್ಲುತ್ತಿಲ್ಲ.ಸಂಶಯ ಪಟ್ಟಿದ್ದ ಸಂಧ್ಯಾಮಾಮಿ ಶೋಭಾಗ ಮೊಣಕೈಲೇ ತಿವಿದ
ನಡ್ರೀ ಸ್ಪೆಷಲ್ ಸ್ವೀಟ ಏನ ಮಾಡ್ಯಾರ ನೋಡುನ ಅಂದ್ಲು.ಹೀಗೆ ಅನೇಕ ಊಹಾಪೂಹಗಳನ ಮಾಡಿ ತಲಿಕೆಡಸಿಕೊಂಡಿದ್ದ
ಮಂದಿ ತಮ್ಮ ತಮ್ಮ ಮುಖ ನೋಡಕೊಂಡರು. ಎಲ್ಲ ಶಾಸ್ತ್ರಗಳು ಮುಗದಮ್ಯಾಲೆ ವಧು-ವರರು ಪುರೋಹಿತರು ಆಶೀರ್ವಾದ
ತೊಗೊಂಡ್ರು,ಇವರ ಹಿಂದ ನಿಂತಿದ್ದ ನಮ್ಮ ಚಿಂತಾಮಣಿ ಮುಂದ ಬಂದು ಆಶೀರ್ವಾದ ತೊಗೊಂಡ್ಲು.ಪುರೋಃಇತರಿಗೆ
ಅಕಿ ಮ್ಯಾಲೆ ಇನ್ನು ಸಿಟ್ಟ ಇಳದಿರಲಿಲ್ಲ ಆವರು ಎರಡು ಕೈ ಮೇಲೆತ್ತಿ “ ನಿನಗು ಇವನಂಥಾ ವರ ಸಿಗಲಿ
“ ಅಂತ ಆಶೀರ್ವಾದ ಮಾಡಿದ್ರು. ಇದು ವಧು ಕಿವಿಗೂ ಬಿತ್ತು ,ಅಕಿ ಇನ್ನಷ್ಟು ಜೋರಾಗಿ ನಗಲಿಕ್ಕೆ ಶುರು
ಮಾಡಿದ್ಲು. ಈ ಥರದ ಆಶೀರ್ವಾದ ಪಡೆದ ಚಿಂತಾಮಣಿ ಚಿಂತಿಸುತ್ತಲೇ ಊಟದ ಮನೆಗೆ ನಡೆದಳು.ತಮ್ಮ ಮಗಳನ್ನ
ಗಂಡನ ಮನೆಗೆ ಕಳಸೋ ಸಮಯ ಬಂತು ಹುಡುಗಿಯ ತಂದೆ ತಾಯಿ ಕಣ್ಣಿನ ಕೋಡೆಯೆ ಹರಿಸುತ್ತಿದ್ದರು. ಆಕೆಯ ಅಣ್ಣ
ಅಳು ಬಂದರೂ ತಡೆದುಕೊಂಡಿದ್ದ ಆದರೆ ಅವಳ ತಮ್ಮ ಮಾತ್ರ ಅಳು ತಡೆಯಲಾರದೆ ಬಿಗಿದಪ್ಪಿ ಅಳುತ್ತಿದ್ದ.
ಆದರೆ ವಧುವಿನ ಮೊಗದಲ್ಲಿ ಅಳುವಿಗಿಂತ ಜಾಸ್ತಿ ನಗೂನೇ ತುಂಬಿತ್ತು. ನಗುವಿಗೆ ಕಾರಣ ಅವಳಿಗೆ ತಿಳಿಯದಾಗಿತ್ತು.ಗಂಡನ
ಮೇಲೆ ನಗುತ್ತಿದ್ದೇನೋ? ಸಂಬಂಧಿಕರ ಮೇಲೆ ನಗುತ್ತಿದ್ದೇನೋ ,ಪುರೋಹಿತರು,ಕಳಸಗಿತ್ತಿ ಚಿಂತಾಮಣಿ ಮೇಲೆ
ನಗೂನೋ? ಎಂದು.
ಇದು ಕೇವಲ ಕಾಲ್ಪನಿಕ. ಮದುವೆ ಬಗ್ಗೆ
ಎನಾದರೂ ಬರೆಯಬೇಕೆಂಬ ತಲೆಯಲ್ಲಿ ಕೆರೆದು ಕೊಳ್ಳುವಾಗ ಹೊಳೆದಿದ್ದಿದು.ಆದ್ದರಿಂದ ಅನ್ಯಥಾ ಭಾವಿಸಬಾರದು,ಹಾಸ್ಯವನ್ನ
ಹಾಸ್ಯವಾಗಿ ಸ್ವೀಕರಿಸುತ್ತಿರಿ ಎಂದು ಭಾವಿಸಿದ್ದೇನೆ.
ಯತ್ಸಾರಭೂತಂ ತದುಪಾಸನೀಯಂ
-HRK

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ