ಶುಕ್ರವಾರ, ಏಪ್ರಿಲ್ 2, 2021

ಈ ಮಳೆಯಲಿ ನೀ ಜೊತೆಯಿರು

 

                  ಏನಪ್ಪ ಇದು ಬೇಸಿಗೆ ಕಾಲದಲ್ಲಿ ಮಳೆಯ ಬಗ್ಗೆ ಹೇಳ್ತಾ ಇದ್ದೀರಾ ಅಂತನಾ,ಹಾಗೇನಿಲ್ಲಾ ನನ್ನ ತಂಗಿ ಸುನಿತಾ ಅವರಣ್ಣ ಛೊಲೋ ಬರಿತಾನಂತ ತಿಳದೋ ಏನೋ ಮಳೆಯ ಮೇಲೆ ಏನಾದರು ಬರಿ ಅಣ್ಣ ಅಂತಾ ಮೆಸೇಜ್ ಮಾಡಿ ಕೇಳಿಕೊಂಡಳು ಅದಕ್ಕೆ ಈ ಪುಟ್ಟ ಲೇಖನ . 
ಅದೇಕೋ ಏನೋ ಗೊತ್ತಿಲ್ಲ ಮಳೆ ಎಂದಾಗ ನಮಗೆಲ್ಲ ನೆನಪಾಗೋದು ಪ್ರೇಮ. ನಿಜ ಹೇಳಬೇಕೆಂದರೆ ಒಂದು ಸರ್ವೇ ಪ್ರಕಾರ ಪ್ರೇಮಿಗಳಿಗೆ ಎಲ್ಲ ಕಾಲಗಳಿಗಿಂತ ಮಳೆಗಾಲ ಹೆಚ್ಚು ಇಷ್ಟವಂತೆ. ಅದೆಂತಕೆ? ಬನ್ನಿ ನೋಡುವ.
               ಮಳೆ ಪ್ರೇಮಕ್ಕೆ ಹೇಳಿ ಮಾಡಿಸಿದ ಕಾಲ.ಪ್ರೇಮಿಗಳಿಗೆ ಸಮಯ ಕಳೆಯಲು ಬೇರೆ ಕಾಲವಿಲ್ಲ. ಈ ಕಾಲದಲ್ಲಿ ತಮ್ಮ ತಮ್ಮ ಪ್ರೇಮಕ್ಕೆ ಮಳೆ ಮತ್ತು ಮಳೆಗಾಲವನ್ನ ಹೋಲಿಕೆ ಮಾಡಿಕೊಳ್ಳುವುದುಂಟು. ಅದರಲ್ಲಂತು ಬರಹಗಾರರ ನಡುವೆ ಪ್ರೀತಿ ಉಕ್ಕಿತೆಂದರೆ ಮುಗಿಯಿತು ಅವರಿಬ್ಬರ ಶಬ್ದ ಪ್ರಪಂಚಕ್ಕೆ ಮಳೆಗಾಲವೇ ವೇದಿಕೆಯಾಗಿ ನಿಂತುಕೊಂಡು ಬಿಡುತ್ತದೆ. ವೇದಿಕೆ ಎಂದರೆ ಕೇಳಬೇಕೆ? ಮಳೆ ಎಂದರೆ ಸಾಕು ಎಲ್ಲವೂ ಅಲ್ಲಿ ಬಹಿರಂಗಗೊಳ್ಳತೊಡಗುತ್ತದೆ. ಅವಳ ಜೊತೆ ಕಳೆದ ಕಾಲ, ಅವನೊಂದಿಗೆ ಮಳೆಯಲ್ಲಿ ನೆನಯುವ ಬಯಕೆ, ಕೆಲವರಿಗೆ ತಮ್ಮ ಜ್ಯಾಕೆಟ್ ತೆಗೆದು ತಮ್ಮ ಪ್ರೇಯಸಿಯ ತಲೆಯಮೇಲೆ ಹೊದಿಸುವ ಆಸೆ ,ಆಶಿಕಿ-2 ನೋಡಿಲ್ಲವೇ ನಾವು! ಹೀಗೆ ಬಹುದೊಡ್ಡ ಪಟ್ಟಿಯೇ ತಯಾರಾಗತ್ತದೆ ಇಲ್ಲಿ.
         ಮಳೆ ಪ್ರೇಮಿಗಳಿಗೆ ಅಷ್ಟೇ ಅಲ್ಲ ಇರೋದು. ಸತಿ-ಪತಿಯರಿಗೂ ಮಳೆ ಅಂದ್ರೆ ಇಷ್ಟಾನೆ. ಯಾಕೆ ಅವರು ಪ್ರೇಮಿಗಳಲ್ವ? ಜಗತ್ತಿನಲ್ಲಿ ಅವರಂತಹ ಪ್ರೇಮಿಗಳು ಎಲ್ಲಿ ನೋಡಿದರು ಸಿಗಲ್ಲ.  ವೆದರ್ ಇಟ್ಸ ಅರೇಂಜ್ ಮ್ಯಾರೇಜ್ ಯಾ ಲವ್ ಮ್ಯಾರೇಜ್, ಜೀವನ ಮುಗಿಯುವವರೆಗು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ನಡೆಸೋ ಜೀವನವಿದೆಯಲ್ಲಾ ಅದು ಸಾಮಾನ್ಯವಾದುದಲ್ಲ.ಅದು ಸರಿ ಮಳೆ ಹೇಗೆ ? ಇಲ್ಲಿ?  ಸತಿ ಪತಿಗಳ ನಡುವೆ ಅಂತೀರಾ?  ಸತಿ ತವರು ಮನೆಯಲ್ಲಿರುವಾಗ ಮಳೆ ಬಂದರೆ ಪತಿರಾಯರಿಗೆ ತಮ್ಮ ಹೆಂಡತಿ ಏನೋ ಹೇಳಬಯಸುತ್ತಿದ್ದಾಳೆ / ಅಥವಾ ನನ್ನ ಬರುವಿಕೆಗೆ ಕಾಯುತ್ತಾ ಇರುವಳೋ ಏನೋ ಅಂತ ಚಿಂತೆ . ಅವರು ಎಲ್ಲಿ ನನ್ನೋಡುವ ಆತುರದಲ್ಲಿ ಮಳೆಯಲ್ಲಿ ನೆನೆದು ಬರುವರೆಂಬ ದುಗುಡ ಸತಿಗೆ. ಇಬ್ಬರೂ ಮನೆಯಲ್ಲಿದ್ದರೆ ಅವಳೊಟ್ಟಿಗೆ ಕೂತು ಬಿಸಿ ಬಿಸಿ ಮಿರ್ಚಿಭಜಿ ಮತ್ತು ಚಹಾ ಹೀರುವ ಆಸೆ ಅವನಿಗೆ. ಇನ್ನು ಜೋರಾಗಿ ಮಳೆ ಬಂದು, ನಿಂತು ಮಣ್ಣಿನ ಸುವಾಸನೆ ಬರುತ್ತದಲ್ಲಾ ಇದಕ್ಕೇನು ಹೋಲಿಸಬಹುದು ನೀವು!? ಜೋರು ಮಳೆ ನಾವು ಇಲ್ಲಿಯವರೆಗೆ ನಮ್ಮ ಪ್ರೇಮ ಯಶಸ್ವಿಯಾಗಲಿ ಎಂಬ ಪಟ್ಟ ಕಷ್ಟ ,ನೋವು ವಿರಹಗಳು. ಮಣ್ಣಿನ ಆ ಸುಗಂಧವೇ ನಮ್ಮ ಪ್ರೇಮದ ಗೆಲುವು. ಅದು ಸುತ್ತಲು ಪಸರಿಸಬೇಕು , ಆ ಗೆಲುವನ್ನ ಸಂಭ್ರಮಿಸಬೇಕು.
            ಸದಾ ಅವಳಿಗವನು ಮತ್ತು ಅವನಿಗವಳು ಎಲ್ಲ ಸಮಯದಲ್ಲು ಜೊತೆಯಿರಬೇಕು. ಪ್ರೇಮ ಎಂದಾಗ ಅಲ್ಲಿ ಎರಡು ಜೀವಗಳು ಜೊತೆಯಿರಲೇಬೇಕು ,ಚುಟುಕುಗಳು ಕುಣಿಯಬೇಕು.
ಎಂತಹ ಸಮಸ್ಯೆ ಬಂದರೂ ನನಗ್ಹೇಗೆ ಅವಳು ಆಸರೆ? ನನಗ್ಹೇಗೆ ಅವನ ಆಸರೆ ಅಂತ ತಿಳಿದು ಕಷ್ಟಗಳೊಂದಿಗೆ ಸೆಣಸಬೇಕು. ಇದಕ್ಕೆ ಪುಟ್ಟ ಉದಾಹರಣೆ ಬಯಲುದಾರಿ ಚಲನಚಿತ್ರದ ಈ ಹಾಡು.

ಬಿರುಗಾಳಿ ಬೀಸಿ ಎದುರಾದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು
ಮಳೆಯಂತ ಬೆಂಕಿ ಧರೆ ಗಿಳಿದರೇನು
ಜೊತೆಯಿರಲು ನೀನು ಭಯಪಡೆನು ನಾನು

ಹೀಗೆ ಒಬ್ಬರಿಗೊಬ್ಬರು ಅರಿತಾಸರೆಯಾಗಬೇಕು.
ಈ ಜೀವನವೆಂಬ ಮಳೆಯಲಿ ನೆನೆದು ಅವನ ಬೆಚ್ಚನೆಯ ಅಪ್ಪುಗೆ ಪಡೆದು , ಪುಟ್ಟ ಆಸೆ ಆಕಾಂಕ್ಷೆಗಳಿಗೆ ಅವನು ಕೊಡೆ ಹಿಡಿಯುವನು ಎಂದು ನಂಬಿದಾಗ , ಅವನು ಅವಳ ಹೆಗಲಮೇಲೆ ಕೈ ಇಟ್ಟು ಅವಳ ತನ್ನ ಮೇಲೆ ಇಟ್ಟಿರುವ ಭರವಸೆಯನ್ನ ಇನ್ನಷ್ಟು ಗಟ್ಟಿ ಮಾಡಬೇಕು.ಹೀಗೆ ಈ ತರಹದ ಮಳೆಯಲಿ ನೀ ಜೊತೆಯಿರಬೇಕು.

ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶೀರ್ವದಿಸಿ.

-HRK💜

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...