ಸೋಮವಾರ, ಅಕ್ಟೋಬರ್ 25, 2021

ರೋನಾಲ್ಡೋ

 

                  ಬಹಳ ದಿನಗಳ ನಂತರ ನನ್ನ ಸ್ನೇಹಿತ ಅಭಯ ಊರಿಗೆ ಬಂದಿದ್ದ.  ಸಂಜೆ ನಾನು ಅವನು ವಾಕಿಂಗಗೆ ಹೊರಟಿದ್ದೆವು. ನಮಗಾದ ಅನುಭವಗಳು, ನಮ್ಮ ಚಿಂತನೆಗಳು ಅಲ್ಲಿ ಎಳೆ ಎಳೆಯಾಗಿ ಬಿಚ್ಚಿಕೊಳುತ್ತವೆ. ನಾವು ಮಾತನಾಡುತ್ತ ಹೊರಟರೆ ಸಮಯದ ಪರಿವೆ ನಮಗಿರುವದಿಲ್ಲ ಮತ್ತು ನಮ್ಮ ಮಾತು ಎಲ್ಲಿಂದ ಆರಂಭವಾಗುತ್ತೆನ್ನುವುದೆ ಅದರ ಅರಿವು ಸಹ ಇರುವದಿಲ್ಲ . ಅವನಿಂದ ಏನಾದರು ಕಲಿತಿದ್ದೇನೆ,ತಿಳಿದುಕೊಂಡಿದ್ದೇನೆ ಎಂಬುವ ವಿಷಯಗಳಿದ್ದರೆ ಅದರಲ್ಲಿದೊಂದು.


               ನನಗೆ ಫುಟ್ಬಾಲ ಆಟದಲ್ಲಿ ಅಷ್ಟು ಆಸಕ್ತಿ ಇಲ್ಲ ಆದರೆ ನನ್ನ ಮಿತ್ರನಿಗೆ ಇದೆ ,ತುಂಬಾನೇ ಇದೆ. ಫುಟ್ಬಾಲ ಅಂದಾಕ್ಷಣ ನಮಗೆ ಇವತ್ತಿಗೆ ನೆನಪಿಗೆ ಬರೋದು ಮೆಸ್ಸಿ ಮತ್ತು ರೋನಾಲ್ಡೋ. ಈರ್ವರ ಸಾಧನೆಗೆ ಜಗತ್ತೇ ನಿಬ್ಬೆರಗಾಗಿದೆ. ಇವರಿಬ್ಬರ ಜೀವನ, ಫುಟ್ಬಾಲ ಆಟಕ್ಕೆ ಪಾದಾರ್ಪಣೆ, ಇವೆಲ್ಲವನ್ನ ಸ್ನೇಹಿತ ಅಭಯ ವಿವರವಾಗಿ ಹೇಳುತ್ತಾ ಹೋಗುತ್ತಿದ್ದ. ಅವತ್ತು ಹೇಳಿದ್ದಕ್ಕಿಂತ ಕೇಳಿದ್ದೇ ಜಾಸ್ತಿ. ಹೇಗೆ ಹೇಳುವದರಲ್ಲಿ ಸುಖವಿದೆಯೋ ಅದು ಕೇಳುವುದರಲ್ಲಿಯೂ ಇದೆ. ರೋನಾಲ್ಡೋ ಬಗ್ಗೆ  ಹೇಳುವಾಗ... ಚಾಂಪಿಯನ್ಸ ಲೀಗನಲ್ಲಿ ಮೊಟ್ಟ ಮೊದಲಬಾರಿಗೆ ಮ್ಯಾಂಚೆಸ್ಟರ ಯುನೈಟೆಡ್ ತಂಡ ವಿಜಯದ ಮಾಲೆ ಧರಿಸಿತು . ಇಡಿ ತಂಡ ಸಂಭ್ರಮದಲ್ಲಿ ಮುಳುಗಿತು. ಆವತ್ತು ರಾತ್ರಿ ರೋನಾಲ್ಡೋ ತನ್ನ ಸಹ ಆಟಗಾರನೊಂದಿಗೆ ಸಂಭ್ರಮವನ್ನಾಚರಿಸಿ ,ಮಧ್ಯರಾತ್ರಿ ಹೊತ್ತಿಗೆ ಶೂ ಧರಿಸಿ, ಕೈಯಲ್ಲಿ ಫುಟ್ಬಾಲ್ ಹಿಡಿದು ಪ್ರ್ಯಾಕ್ಟೀಸ ಮಾಡಲು ಹೊರಟರು. ಸಹ ಆಟಗಾರ ಇದೇನು ಈಗ ಪ್ರ್ಯಾಕ್ಟೀಸು? ಗೆದ್ದಿದ್ದೇವೆ ಅಲ್ಲವಾ, ಬಾ ಸಂಭ್ರಮಿಸೋಣ ಎಂದಾಗ ರೋನಾಲ್ಡೋ ಗೆದ್ದಿದ್ದೇವೆ ನಿಜ, ಆದರೆ   "ನಿಜವಾದ ಗೆಲುವು ಆ ಸ್ಥಾನದಲ್ಲಿ ಉಳಿದುಕೊಳ್ಳುವುದು". ಎಂದ್ಹೇಳಿ ಹೊರಟು ಹೋದರು. ಸ್ನೇಹಿತನ ಬಾಯಿಂದ ಈ ಮಾತು ಕೇಳಿದಾಗ ನನ್ನೊಳಗೆ ಮಿಂಚು ಸಂಚಾರವಾದಂತಾಯಯಿತು. ಎಂತಹಾ. ಅದ್ಭುತ ಯೋಚನೆ.


              ಇವತ್ತಿರುವ ನೌಕರಿ ನಾಳೆ ನಮಗೆ ಇರುತ್ತದೆ, ಇಲ್ಲವೋ ಎಂಬ ಭರವಸೆ ನಮಗಿರುವದಿಲ್ಲ. ಏಕೆಂದರೆ ನಮಗೆ ನಮ್ಮಲ್ಲಿ ನಂಬಿಕೆ ಅಲ್ಪ ಸ್ವಲ್ಪ ಇದೆ, ಅದು ಆಗಾಗ ಬಂದು ಹೋಗುತ್ತದೆ ಮತ್ತು ಮಾಡುವ ಕೆಲಸದಲ್ಲಿ ಖುಷಿಯಿಲ್ಲ. ಒಮ್ಮೆ ನೌಕರಿ ಸಿಕ್ಕ ಮೇಲೆ ಅದನ್ನು ಕಾಯ್ದುಕೊಳ್ಳಬೇಕು. ಅದಕ್ಕೆ ಅನೇಕ ದಾರಿಗಳಿವೆ. ಒಮ್ಮೆ ಗೆದ್ದಮೇಲೆ ಸುಮ್ಮನೆ ಕುಳಿತುಕೊಳ್ಳುವಹಾಗಿಲ್ಲ ಎಲ್ಲರ ಗುರಿಗಳನ್ನ ಮುರಿಯುವ ಗುರಿ ನಮ್ಮದಾಗಬೇಕು, ಎಲ್ಲರ ಗುರಿ ಮುರಿದಾಗ ನಮ್ಮ ಗುರಿಯನ್ನ ನಾವು ಮುರಿಯಬೇಕು. ಇದನ್ನೇ ಫ್ಲೋ ಅಂತ ಇಕಿಗೈ ಪುಸ್ತಕ ನಮಗೆ ತಿಳಿಸಿ ಕೊಡುತ್ತದೆ. ನಾವು ನಮ್ಮ ನೆಚ್ಚಿನ ಕೆಲಸದಲ್ಲಿ ನಿರಂತರತೆ ಕಾಪಾಡಿಕೊಂಡಿರುತ್ತೇವೆ . ಕೆಲಸದಲ್ಲಿ ತೊಡಗಿರುವುದೇ ಒಂಥರಾ ಖುಷಿ. ಆ ಖುಷಿಯನ್ನ ವರ್ಣಿಸಲಾಗದು. ಮಾನ್ಯ ಗುಂಡಪ್ಪನವರು ಹೇಳುವ ಹಾಗೆ ಗುರಿ ಎಂದರೆ ಗುರಿಗಳ ಸಾಲು ಅಂತ. ಸಣ್ಣ ಗುರಿಗಳು ತಲುಪುವ ಮುನ್ನ ಆಗುವ ಅನುಭವಗಳು, ಆ ಅನುಭವಗಳನ್ನೇ ಮೆಟ್ಟಿಲಾಗಿಸಿ ಗುರಿ ಮುಟ್ಟುವುದೇ ಒಂದು ಖುಷಿ. ರೋನಾಲ್ಡೋ ಹೇಗೇ ಇರಲಿ ,ಅವರ ಜೀವನ ಪದ್ಧತಿ ಹೇಗೇ ಇರಲಿ ನಮಗೆ ಸಂಬಂಧಪಟ್ಟಿದ್ದಲ್ಲ, ನಮಗೆ ಸಂಬಂಧಪಟ್ಟಿದ್ದು ಯಾವುದೋ ಅದನ್ನ ಸ್ವೀಕರಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಲ್ಲವೇ! ಅದಕ್ಕೆ ನಮ್ಮ ಪೂರ್ವಜರು ಹೇಳಿದ್ದು 'ಯತ್ಸಾರಭೂತಂ ತದುಪಾಸನೀಯಂ' ಅಂತ.


ಲೇಖನ:ಹರಿಕೃಷ್ಣ .ಹ.ಕೊಲ್ಹಾರ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...