ಗುರುವಾರ, ಜನವರಿ 27, 2022

         


ನೀ-ಸ್ವಾರ್ಥ ನಿಸ್ವಾರ್ಥವಾಗಬೇಕು

                      ನಾವು ಹೇಗಿರಬೇಕು? ನಮ್ಮ ನಡವಳಿಕೆ ಹೇಗೆ ಇರಬೇಕು? ಎಂದು ನಾವು ದಿನಾಲು ಯೋಚಿಸುತ್ತೇವೆ. ಪರರಿಗೆ ಇದು ಮಾತ್ರ ಸ್ವಾರ್ಥ ಚಿಂತನೆಯಂತೆ ಕಾಣುತ್ತದೆ. ಹಾಗಂತ ಅವರು ಹೇಳಿದ ಅಥವಾ ಅಂದುಕೊಂಡ ಹಾಗೆ ಪರರಿಗಾಗಿ ಬದುಕಲು ಸಾಧ್ಯವಿಲ್ಲ.ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು? ಬನ್ನಿ ತಿಳಿಯೋಣ.
                     ಹೀಗೆ ಅಂತ ಗುರುತಿಸಲು ಹೊರಟಿರುವವರೆಗೆ ಅಚ್ಚರಿಯ ಹಾದಿ ಗೋಚರ ಮಾಡಿಕೊಡುವುದೇ ಪ್ರಪಂಚ. ಸಣ್ಣ ಸಣ್ಣ ಪ್ರಪಂಚಗಳು ಕೂಡಿ ಅನಂತ ಪ್ರಪಂಚವಾಗಿದೆ. ಈ ಅನಂತ ಪ್ರಪಂಚಗಳಲ್ಲೊಂದು ಶಬ್ದ ಪ್ರಪಂಚ. ಇದು ಕೂಡ ಅದ್ಭುತಗಳಾಗರ. ಹೀಗೆ ಯೋಚಿಸಬೇಕಾದರೆ ಹೊಳೆದಿದ್ದು ನಿಸ್ವಾರ್ಥ ಪದ. ಪ್ರಾಯಶಃ ಇದರ ಮೇಲೆ ಲೇಖನ ಬರಿಯಲೇ ಬೇಕು ಎಂದು 3 ತಿಂಗಳುಗಳ ಹಿಂದೆಯೇ ಯೋಚಿಸಿದ್ದೆ ಅದು ನಿಮ್ಮ ಮುಂದೆ ಈಗ ಇಡುತ್ತಿದ್ದೇನೆ. 
                         ನಿಸ್ವಾರ್ಥ ಶಬ್ದ ನೋಡಲು ಮೂರಕ್ಷರ, ಆದರೆ ಸ್ವಲ್ಪ ದೀರ್ಘವಾಗಿ, ಬಿಡಿಸಿ ಅರ್ಥೈಸಿಕೊಂಡರೆ ಇದರಲ್ಲೊಂದು ಅದ್ಭುತ ಅಡಗಿದೆ ಅಂತ ಅನ್ನಿಸುತ್ತದೆ. ಅದನ್ನ ಉದಾ ಮೂಲಕ ನೋಡೋಣ
'ರಾಮ ನಿಸ್ವಾರ್ಥಿ' ಇಲ್ಲಿ ಸಾಮಾನ್ಯ ಅರ್ಥದಲ್ಲಿ ನೋಡುವುದಾದರೆ ರಾಮ ಯಾವುದೇ ಸ್ವಾರ್ಥವನ್ನ ಬಯಸದಿರುವ ವ್ಯಕ್ತಿ ಎಂದಾಗುತ್ತದೆ. ಮತ್ತೀಗ ಕೇವಲ ನಿಸ್ವಾರ್ಥ ಶಬ್ದವನ್ನ ತೆಗೆದುಕೊಳ್ಳೋಣ  , ಹೇಗೆ ನಿಸ್ವಾರ್ಥ ಪದದಲ್ಲಿ ಸ್ವಾರ್ಥ ಅಡಗಿದೆಯೋ ಅಷ್ಟಾದರು ಸ್ವಾರ್ಥ ಮನುಷ್ಯನಲ್ಲಿ ಇರಬೇಕು, ಇನ್ನು ಸ್ವಲ್ಪ ಹೆಚ್ಚಿಗೆ ವಿವರಿಸುವುದಾದರೆ ನಿಸ್ವಾರ್ಥ ಪದದಲ್ಲಿ 'ನಿ'  ಹೃಸ್ವವಾಗಿದೆ 'ನೀ' ಅಂತ ದೀರ್ಘವಾಗಿಲ್ಲ. ನೀ ಎಂಬುವುದು ಅತಿಯನ್ನು ಬಿಂಬಿಸುತ್ತದೆ , ನಮ್ಮ ಪೂರ್ವಜರು, ಪೌರಾಣಿಕರು ಹೇಳುವ ಹಾಗೆ 'ಅತಿ ಸರ್ವತ್ರ ವರ್ಜಯೇತ್', ಅತಿಯಾದದ್ದನ್ನು ತ್ಯಜಿಸು ಎಂದಿದ್ದಾರೆ . ನೀ ಯೊಳಗಿರುವ ಗರ್ವವೆಂಬ ಕೊಂಬನ್ನು ಮುರಿದು ಅತಿ ಸ್ವಾರ್ಥಿಯಾಗಿರದೆ ನಿಸ್ವಾರ್ಥಿಯಾಗಿರೋಣ , ಅದಕ್ಕೆ ನೀ ಸ್ವಾರ್ಥಿಯಾಗದೆ ನಿಸ್ವಾರ್ಥಿಯಾಗು ಎಂದು ತಿಳಿಸುವ ಪ್ರಯತ್ನ ಇದಾಗಿದೆ.
                     ಮೇಲಿನ ಚಿಂತನೆ ನಿಮಗೆ ವಿಚಿತ್ರವೆನಿಸಬಹುದು ,ಏನಿದು ಒಂದು ಪದ,ಶಬ್ದವನ್ನ ಹೀಗೆ ಅರ್ಥೈಸಬಹುದಾ ಅಂತ. 
ಇಲ್ಲಿ ಕೇವಲ ಒಂದು ಅಕ್ಷರಕ್ಕೆ ಅರ್ಥ ಕೊಡುವ ಶಬ್ದಕೋಶಗಳು ಲಭ್ಯವಿವೆ (ಏಕಾಕ್ಷರ ಕೋಶ). ಒಂದೇ ಅಕ್ಷರಕ್ಕೆ ಅರ್ಥ ಇರಬೇಕಾದರೆ, ಅಕ್ಷರಗಳಿಂದ ಕೂಡಿದ ಶಬ್ದಗಳಲ್ಲಿ ಅರ್ಥವಿದ್ದೇ ಇರುತ್ತದೆ. ಅದನ್ನ ಆಧರಿಸಿಯೇ ಈ ಲೇಖನ ಬರೆಯುವ ಪ್ರಯತ್ನ ಮಾಡಿದ್ದು, ಈ ಪುಟ್ಟ ಲೇಖನವನ್ನ ಓದಿ ಒಳ್ಳೆಯ ಶೀರ್ಷಿಕೆ ನೀಡಿದ ಮಿತ್ರ ರಾಜೇಶ ಭಟ್‌ ಅವರಿಗೆ ಧನ್ಯವಾದಗಳು .ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರು ಆಶೀರ್ವದಿಸಿ.
-Hrk

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...