ಮದಿರಾಲಯ ಜಾನೇ ಕೋ
ಘರ ಸೇ ಚಲತಾ ಹೈ ಪೀನೇವಾಲಾ,
ಕಿಸ್ ಪಥ ಸೋ ಜಾವೂಂ ಅಸಮಂಜಸ್
ಮೇ ಹೈ ವಹ ಭೋಲಾ ಭಾಲಾ,
ಅಲಗ್ ಅಲಗ್ ಪಥ ಬತಲಾತೇ ಸಬ್
ಪರ ಮೇ ಯಹ ಬತಲಾತಾ ಹೂಂ,
ರಾಹ ಪಕಡ ತೂ ಏಕ್ ಚಲಾ ಚಲ
ಪಾ ಜಾಯೇಗಾ ಮಧುಶಾಲಾ|
ಹಿಂದಿ ಭಾಷೆಯ ಪ್ರಸಿದ್ಧ ಕವಿ ,ಲೇಖಕರಾದ ಹರಿವಂಶರಾಯ ಬಚ್ಚನ ಅವರು ಬರೆದಿರುವ 'ಮಧುಶಾಲಾ' ದಿಂದ ಆಯ್ದ ಪದ್ಯ ಭಾಗವಿದು. ಏನೋ ಗೊತ್ತಿಲ್ಲ ಈ ಪದ್ಯಭಾಗ ಬಹಳ ಹಿಡಿಸಿತು. ಕಾರಣ ತಿಳೀಲಿಲ್ಲ .7-8 ಸಲ ಓದಿದೆ , ಪ್ರತಿ ಬಾರಿ ಓದುವಾಗಲು ಇದರಲ್ಲೇನೋ ಇದೆ ಅದನ್ನು ತಿಳಿಸೋ ಎಂದು ನನ್ನ ಒಳಮನಸ್ಸು ಹೇಳುತ್ತಲೆ ಇತ್ತು. ಹೀಗೆ ಓದುತ್ತಲೇ,ಪಠಿಸುತ್ತಲೇ ಇರುವಾಗ ಹೊಳೆದಿದ್ದೆ 'ಬಚ್ಚನ ಜೀ ಹೀಗೂ ಹೇಳಿರಬಹುದಾ?' ಅಂತ
ಮೇಲಿರುವ ಪದ್ಯ ಭಾಗದಲ್ಲಿ 'ಮದಿರಾಲಯ' ಮತ್ತು 'ಮಧುಶಾಲೆ' ಪದಗಳನ್ನು ತೆಗೆದು ಅಲ್ಲಿ ನಮ್ಮ ಜೀವನದ ಧ್ಯೇಯ,ಗುರಿ ಇಟ್ಟುಕೊಳ್ಳೋಣ.(ಮಧುಶಾಲೆ,ಮದಿರಾಲಯ ಅಂದ್ರೆ ಮದ್ಯದಂಗಡಿ ಅಂತ ಅರ್ಥ). ಪೀನೇವಾಲಾ ಪದ ತೆಗೆದು ನಮ್ಮನ್ನು ಅಲ್ಲಿ ಕಲ್ಪಿಸಿಕೊಳ್ಳೋಣ. (ಪೀನೆವಾಲಾ ಅಂದ್ರೆ ಮದ್ಯ ಸೇವಿಸುವವನು ಅಂತ ಅರ್ಥ)
ಈಗ ಆ ಪದ್ಯಭಾಗವನ್ನ ಅವಲೋಕಿಸುತ್ತ ಬರೋಣ 'ಮದಿರಾಲಯ ಜಾನೇ ಕೋ ಘರ ಸೇ ಚಲತಾ ಹೈ ಪೀನೇವಾಲಾ ' ಅಂತ ಇದೆ ಸಾಮಾನ್ಯವಾಗಿ ನಮಗೆ ತಿಳುವಳಿಕೆ ಬಂದಾಗ ಒಂದು ಧ್ಯೇಯ ಇಟ್ಟಕೊಂಡು ಮುಂದೆ ಹೋಗಬೇಕು ಅಂತ ಇರ್ತೇವೆ. ಆಗ ನಮಗೆ ಅದರ ದಾರಿಯ ಬಗ್ಗೆ ಹೆಚ್ಚಿನ ಅರಿವು ಇರುವದಿಲ್ಲ ,ಅಥವಾ ನಮಗೆ ಯಾವ ದಾರಿಯಿಂದ ಹೋದರೆ ಆ ಗುರಿ ಮುಟ್ಟಬಹುದು ಎಂಬ ಯೋಚನೆಯಲ್ಲಿರುತ್ತೇವೆ .ಅದೇ 'ಕಿಸ್ ಪಥ(ದಾರಿ) ಸೇ ಜಾವೂಂ ಅಸಮಂಜಸ್ ಮೇ ಹೈ ವಹ ಭೋಲಾ ಭಾಲಾ.
ಆದ್ರೆ ಜನ ಆ ದಾರಿ ಹಿಡಿ ನಿನಗೆ ಒಳ್ಳೆದಾಗುತ್ತೆ , ನಾ ಹೇಳಿದ್ದು ಕೇಳು ಹೀಗೆ ಮಾಡು , ಇಂಜಿನಿಯರಿಂಗ ಮಾಡು ಅಂತ ಒಬ್ರು , ಇಂಜಿನಿಯರಿಂಗ ಒಳಗ ಮೆಕ್ಯಾನಿಕಲ್ ಮಾಡು ನಿಂಗ ಸ್ಕೋಪ ಅದ , ಇನ್ನೊಬ್ರು ಟಾಪರ್ ಸಹವಾಸ ಮಾಡು ಸ್ಕೋರ ಆಗ್ತದ ಅಂತ ಹಿಂಗ ಅನಂತ ಮಾರ್ಗಗಳನ್ನ ತೋರಿಸುತ್ತಾ ಇರುತ್ತಾರೆ. ಇದೇ ಅಲಗ್ ಅಲಗ್ (ಬೇರೆ ಬೇರೆ) ಪಥ ಬತಲಾತೇ ಸಬ್ ಎಂದು ಮುಂದುವರೆಸುತ್ತಾ ಬಚ್ಚನ ಜೀ ನಾ ಒಂದು ಮಾರ್ಗ ಹೇಳ್ತೀನಿ ಕೇಳು ಅಂತ 'ರಾಹ್ ಪಕಡ್ ತೂ ಏಕ ಚಲಾ ಚಲ್ ಪಾ ಜಾಯೇಗಾ ಮಧುಶಾಲಾ' ನೀ ಯಾವುದೇ ಒಂದು ಹಾದಿ ಹಿಡಿಯಪ್ಪ ನಿನ್ನ ಗುರಿ ನೀ ತಲುಪೇ ತಲುಪುತ್ತಿಯಾ ಅಂತ.ಬಚ್ಚನ ಜೀ ಈ ಪದ್ಯಭಾಗ ಹೀಗು ಅರ್ಥೈಸಿದ್ದಾರೆ ಅಂತ ಇದು ನನ್ನ ಅನಿಸಿಕೆಯಷ್ಟೆ.
ಇದಕ್ಕೆ ಹೊಂದಾಣಿಕೆಯಾಗುವಂತೆ ಕಗ್ಗದ ರೂಪದಲ್ಲಿ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗದಲ್ಲಿಯೂ ಕಾಣುತ್ತೇವೆ.
'ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು ।ನೆನೆಯದಿನ್ನೊಂದನೆಲ್ಲವ ನೀಡುತದರಾ ।।ಅನುಸಂಧಿಯಲಿ ಜೀವಭಾರವನು ಮರೆಯುವುದು ।ಹನುಮಂತನುಪದೇಶ – ಮಂಕುತಿಮ್ಮ ।।'
ಭಾಷೆ ಬೇರೆಯಿರಬಹುದು, ಅರ್ಥ ಕೊಂಚ ಭಿನ್ನವಿದ್ದರೂ ತತ್ವ ಒಂದೇ. ತತ್ವ ಇದೇ ಎಂದರೆ ತತ್ವೋಪದೇಶಕ ಇರಲೇಬೇಕಲ್ಲವೇ? ತತ್ವವನ್ನ ಹೊರಗೊಳಗೆ ಆವರಿಸಿದವನು ಯಾವನೋ ಅವನೇ ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಬರೀ ಗೀಚು ಗೀಚು ಅಂತಾನೆ.
ಕಡೆಯದಾಗಿ ಅದೇನೆ ಗ್ರಾಮರ್ ಮಿಸ್ಟೇಕ ಇದ್ರು ಆಶೀರ್ವದಿಸಿ.
-Hrk
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ