ಗುರುವಾರ, ಜೂನ್ 16, 2022

ಲವ್ ಕೆಮಿಸ್ಟ್ರಿ

               


      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ್ಗೆ ಪಿಸಿ ಪಿಸಿ ಮಾತುಗಳನ್ನಾಡೋದು, ಅವನ ಹುಡಗಿ ಅವನ ಪಕ್ಕ ಹೋದರೆ, ಅವಳ ಹುಡಗ ಅವಳನ್ನು ಮಾತನಾಡಿಸಿದಾಗ ಗೆಳೆಯ ಗೆಳತಿಯರ ಕುಹಕವಾಗಿ ಕೆಮ್ಮುವುದು. ಇದೇನು ಪದೇ ಪದೇ ಕುಹಕ ಕೆಮ್ಮು ಎನ್ನುತ್ತಿದ್ದೀರ ?ಅನ್ನಬೇಡಿ. ಅದನ್ನು ಇಲ್ಲಿ ಕೆಮ್ಮಿ ತೋರಿಸಲಾಗುವುದಿಲ್ಲ. ಅನುಭವಿಸಿದವರೆ ಒಂಥರಾ ಭಾಗ್ಯವಂತರು. 

            ಅಷ್ಷರಲ್ಲಿ ಒಬ್ಬಾಕೆ ತನ್ನ ಗೆಳತಿಯ ಮೊಣಕೈ  ತಿವಿದು "ಲೇ ಕೆಮ್ ಲೆಕ್ಚಚರ್ ಬಂದ್ರು ' ಅಂದ್ಲು.  ಏನಿದು ಕೆಮ್ ಅಂದ್ರೆ ? ಆಧುನಿಕರಿಗೆ ಎಲ್ಲವನ್ನು ಶಾರ್ಟ ಮಾಡುವುದು ಹಾಬಿ ಅಲ್ಲವೇ! ಅದಕ್ಕೆ Chemistry ಇಲ್ಲಿ Chem (ಕೆಮ್) ಆಗಿರೋದು. ತಿವಿಸಿಕೊಂಡಾಕೆ ಮೊಬೈಲ ಗುಂಗಿನಿಂದ ಹೊರಬಂದಿಲ್ಲ. ಲೆಕ್ಚರರ್ ಬಂದ್ದು ಜೋರಾಗಿ ಗಂಟಲು ಸರಿಮಾಡಿಕೊಳ್ಳುವ ರೀತಿಯಲ್ಲಿ ಕೆಮ್ಮಿದರು. ಆಗಲೂ ತಿವಿಸಿಕೊಂಡಾಕೆ ಮಾತ್ರ  ತನ್ನ ಗುಂಗಿನಲ್ಲಿಯೇ ಇದ್ದಳು.  ಏನು ಮಾಡೋದು ಲೆಕ್ಚರರ್ ದು ಹೈಡ್ರೋಜನ್ ಬಾಂಡ, ಕೋವೆಲಂಟ್ ಬಾಂಡಗಳ ಕೆಮಿಸ್ಟ್ರಿಯಾದರೆ ಗುಂಗಿನ ಹುಡುಗಿಯದು ಜೇಮ್ಸ ಬಾಂಡ ಮತ್ತು ಪ್ರೇಯಸಿಯ ಕೆಮಿಸ್ಟ್ರಿ . ಕ್ಲಾಸರೂಮಿನಲ್ಲಿ ಕಣ್ಣು ತಪ್ಪಿಸಿ ಚಾಟ ಮಾಡೋದೆ ಈರ್ವರ ಸಾಹಸಗಾಥೆ. 

         ಹರೆಯದ ಹುಡುಗಿಗೆ ಹರೆಯದ ಹುಡುಗ ಸಮಯ ಕೊಡಹತ್ತಿದರೆ ಮಾಸ್ತರನ ಕೆಮಿಸ್ಟ್ರಿ ಹರೆಯೇ ನಮಃ . ಕೆಮ್ಮ ಮಾಸ್ತರನ ಕೆಮ್ಮಿಗೆ ಎಚ್ಚೆತ್ತುಕೊಳ್ಳದವಳು , ಇನ್ನು ಮಾಸ್ತರ ಹೇಳುವ ಕೆಮ್ ಗೆ ಹೇಗೆ ಲಕ್ಷ್ಯ ಕೊಟ್ಟಾಳು? ಅಲ್ಲವೇ?

-Hrk💜

ಗುರುವಾರ, ಮೇ 26, 2022

ಇಂಥ ಪ್ರೀತಿ ನಮ್ಮದಾಗಲಿ


             ಪ್ರೀತಿಯೆಂದರೆ ರಾಧೆ ಕೃಷ್ಣರ ಪ್ರೀತಿಯಲ್ಲ, ಕೃಷ್ಣ ರುಕ್ಮಿಣಿಯರ ಪ್ರೀತಿ. ಸತ್ಯಭಾಮ ಕೃಷ್ಣರ ಪ್ರೀತಿ. ಕಟ್ಟಿಕೊಂಡ ಹೆಂಡತಿ ಕಡೆಯವರೆಗು ನನ್ನೊಟ್ಟಿಗೆ ಇರುವಳೋ ಇಲ್ಲವೋ, ಅದೇ ರೀತಿ ಕಟ್ಟಿಗೊಂಡ ಗಂಡ ನನ್ನೊಟ್ಟಿಗೆ ಇರುವನೋ ಇಲ್ಲವೋ?  ಚಟಕ್ಕೆ ದಾಸನಾಗಿ ಬಿಟ್ಟು ಹೋಗುವನೋ ಎಂಬ ಭೀತಿಯಲ್ಲಿ ಬದುಕುತ್ತಿದೆ ಇಂದಿನ ಜನತೆ. 

              ಮದುವೆಯ ಮುಂಚೆ ಪ್ರೇಮದ ಬಗ್ಗೆ ಮಾತನಾಡುವ ನಾವು, ರಾಧೆ-ಕೃಷ್ಣರ ಉದಾಹರಣೆಯನ್ನ ತೆಗೆದುಕೊಳ್ಳುತ್ತೇವೆ ಆದರೆ ಮದುವೆಯ ನಂತರ ಯಾರ ಉದಾಹರಣೆ ನಾವು ತೆಗೆದುಕೊಳ್ಳುತ್ತೇವೆ? ಯಾರ ಆದರ್ಶವಿಟ್ಟುಕೊಂಡು ಬದುಕುತ್ತಿದ್ದೇವೆ?  ಹೀಗೆ ನೀರಸದತ್ತ ಸಾಗುತ್ತಿದೆ ನಮ್ಮ ಬದುಕು. ಸಂಸಾರದಲ್ಲಿ ತುಂಟಾಟವಿರಬೇಕು ,ಹಾಸ್ಯದ ಹೊನಲು ಹರಿಯಬೇಕು ಪರಸ್ಪರ ಮಾಡುವ ಕೆಲಸದಲ್ಲಿ ಹೊಂದಾಣಿಕೆ ಇರಬೇಕು. ಅಂದರೆ ತಾನೆ ಸಂಸಾರದಲ್ಲಿ 'ಸಾರ'ಭೂತವನ್ನ ತೆಗೆಯಲಿಕ್ಕಾಗುವುದು! 

                 ನನ್ನಮ್ಮ  ಆವಾಗವಾಗ ಒಂದು ಹಾಡನ್ನು ಹಾಡುತ್ತಾಳೆ. ಅವಳಿಗೂ ಅಷ್ಟು ಆ ಹಾಡು ನೆನಪಿನಲ್ಲಿ ಉಳಿದಿಲ್ಲ. ಅದನ್ನು ಅಷ್ಟೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. ಇದು ಸತ್ಯಭಾಮ ಮತ್ತು ಶ್ರೀಕೃಷ್ಣರ ಸಂವಾದ. 

ಕಾಂತಾ ನಿನ್ನ ಮುಖವನು ಈಗ ಮುಂದೆ ತಿರುಗಿಸು ಬೇಗ ಮತ್ತೆ ಹಿಂದೆ ತಿರುಗಿಸು ಬೇಗ...

ಕೃಷ್ಣರಾಯರೆ ನಿಮ್ಮ ಒಪ್ಪುವ ತುಟಿಗೆ ಬಣ್ಣನ್ಯಾಕ ಹತ್ಯದ ಮತ್ತೆ ಗೀರನ್ಯಾಕ ಮೂಡ್ಯಾವ...

ಜಂಬು ನೇರಳೆ ಹಣ್ಣು ತಿನ್ನುವಾಗ ತುಟಿಗೆ ಹತ್ಯದ ಭಾಮಿನಿ ಅದು ಬಣ್ಣವಲ್ಲವೇ ಭಾಮಿನಿ.


ಕೃಷ್ಣರಾಯರೆ ನಿಮ್ಮ ಒಪ್ಪುವ ಗಲ್ಲಕೆ ನತ್ತನ್ಯಾಕ ನಟ್ಟದ ಆಮ್ಯಾಲೆ ಗೀರನ್ಯಾಕ ಮೂಡ್ಯದ...

ಅರ್ಥಿಲಿ ಶಂಖ ಹಿಡಿದು ಊದುವಾಗ ಒತ್ತಿ ನಟ್ಟದ ಭಾಮಿನಿ ಅದು ನತ್ತನಲ್ಲವೇ ಭಾಮಿನಿ


ಕೃಷ್ಣರಾಯರೆ ನಿಮ್ಮ ಒಪ್ಪುವ ಪೀತಾಂಬರಕೆ ಬಣ್ಣನ್ಯಾರು ಹಾಕ್ಯಾರ ಮತ್ತ ರಂಗನ್ಯಾರ ಚೆಲ್ಯಾರ?

ವಸಂತಕಾಲ ಓಕುಳಿ ಆಡ್ಯಿನೇ ಭಾಮಿನಿ ಅದು ಬಣ್ಣನಲ್ಲವೇ ಭಾಮಿನಿ


ಕೃಷ್ಣರಾಯರೆ ನಿಮ್ಮ ಒಪ್ಪುವ ಬೆನ್ನಿಗೆ ಹೆರಳನ್ಯಾಕ ಮೂಡ್ಯದ ಮತ್ತ ಗೀರನ್ಯಾಕ ಮೂಡ್ಯಾವ?

ಕ್ಯಾದಿಗೆ ಬನದಾಗ ಸುಳಿದು ಬರುವಾಗ ಗರಿಯ ತಾಕ್ಯದ ಭಾಮಿನಿ ಅದು ಹೆರಳನಲ್ಲವೇ ಭಾಮಿನಿ.


ಕೃಷ್ಣರಾಯರೆ ನೀವು ಯಮುನಾ ತೀರಕೆ ಹೋದ ಕಾರಣವೇನು ?ಅಲ್ಲಿ ನಿಂತ ಕಾರಣವೇನು?

ಕೆಂಚಿಯರೆಲ್ಲ ಕಂಚಿನ ಕೊಡವ ಹೊರಿಸು ಎಂದರೆ ಭಾಮಿನಿ, ಪುರಂದರ ವಿಠ್ಠಲನ ದಯದಿಂದ ಹೊರೆಸಿ ಬಂದೆನೆ ಭಾಮಿನಿ.


(ಅಲ್ಲಲ್ಲಿ ಶಬ್ದ,ಸಾಲು ದೋಷಗಳಿವೆ ಅದಕ್ಕೆ ಕ್ಷಮೆಯಿರಲಿ.)


ಹೀಗೆ ಪತಿ ಪತ್ನಿಯರ ನಡುವೆ ಹಾಸ್ಯ,ತುಂಟತನವಿರಬೇಕು, ವಿನೋದದ ಮಾತುಗಳಿರಬೇಕು. ಯದ್ಯಪಿ ಕೃಷ್ಣ ಪರಮಾತ್ಮನ ಮಹಾತ್ಮ್ಯ ಸತ್ಯಭಾಮಳಿಗೂ ಗೊತ್ತು. ತನ್ನ ಪತಿಯನ್ನ ಬಯಸುವವರು ಅನಂತ ಜೀವರುಗಳು ಅಂತ. ಹದಿನಾರು ಸಾವಿರ ಮೇಲ್ಪಟ್ಟು ಪತ್ನಿಯರನ್ನು ಹೊಂದಿದ್ದ ಕೃಷ್ಣನೂ ಪ್ರತಿಯೊಬ್ಬರೊಂದಿಗೆ ಸಮಯ ಕಳೆಯುತ್ತಿದ್ದ. ಒಬ್ಬ ಪತ್ನಿ ಮನೆಯಲ್ಲಿ ಊಟವಾದರೆ , ಮತ್ತೊಬ್ಬರ ಮನೆಯಲ್ಲಿ ತಾಂಬೂಲ ಮೆಲ್ಲುತ್ತಿದ್ದ, ಹೀಗೆ ಪ್ರತಿಯೊಬ್ಬರ ಮನೆಯಲ್ಲಿಯು, ಪ್ರತಿಯೊಬ್ಬರಿಗೂ ಸಮಯ ಕೊಡುತ್ತಿದ್ದ. ಆದರೆ ಇಂದು ಏನಾಗಿದೆ ಕಟ್ಟಿಕೊಂಡ ಒಬ್ಬ ಹೆಂಡತಿಗೆ ಸಮಯ ಕೊಡಲಿಕ್ಕಾಗುತ್ತಿಲ್ಲ.  ಇನ್ನು ಕೃಷ್ಣನ ಕಂಡು 2-3 ಮದುವೆಯಾಗುವ ಮಹಾನುಭಾವರು ಇದ್ದಾರೆ, ಆದರೆ ಅವನಿಂದ ಪಾಠ ಕಲಿಯಬೇಕಾದದ್ದು ಇದಲ್ಲ ಕಟ್ಟಿಕೊಂಡ ಒಬ್ಬ ಹೆಂಡತಿಗೆ ಪ್ರೀತಿ ತೋರಿಸದರೆ ಸಾಕು. ಕೃಷ್ಣನಿಂದ ಪ್ರೀತಿ ಮಾಡುವದನ್ನ ಕಲಿಯಬೇಕು ವಿನಃ ಕೃಷ್ಣನಂತೆ ಮದುವೆಯಾಗುವದಲ್ಲ. ಅವನು ದೇವರು, ಅವನು ಅನಂತ ,ಅನಂತ ಪತ್ನಿಯರಿಗೆ ಅನಂತವಾಗಿ ಸುಖ ಕೊಡಬಲ್ಲವ ಆದರೆ ನಾವು ದೇವರಾಗಲು ಸಾಧ್ಯವೇ? ದೇವರಂತೆ ವರ್ತಿಸಲು ಸಾಧ್ಯವೇ? ಹಾಗಂತ ಹತಾಶರಾಗಬೇಕಿಲ್ಲ. ನಾವೆಲ್ಲ ದೇವರ ಮಕ್ಕಳು ಅನಂತ ಶಕ್ತಿಯನ್ನು ಹೊಂದಿರುವ ದೇವರ ಮಕ್ಕಳು ನಾವು . ನಮಗೂ ದೇವರು ಶಕ್ತಿ,ಯುಕ್ತಿ, ಸಾಮರ್ಥ್ಯ ಕೊಟ್ಟಿದ್ದಾನೆ . ಅದನ್ನ ಸದುಪಯೋಗ ಪಡಿಸಿಕೊಳ್ಳೋಣ ತಂದೆ,ತಾಯಿ, ಪತ್ನಿ,ಮಕ್ಕಳಲ್ಲಿ ಪ್ರೀತಿ ತುಂಬೋಣ. ದೇವರ ಮಕ್ಕಳೆಂದು ಖುಷಿಯಿಂದ ಬದುಕೋಣ.

Take what is useful discard what is not.


ಶುಕ್ರವಾರ, ಏಪ್ರಿಲ್ 8, 2022

2 Mistakes in a Month

                    

                      It was women's day, I was in little cool and a happy mood. I'm on the social media page where I make memes and traditional posts with my senior friends. So I opened my cell and started to create a post about women's day. It was a post to wish our female admins. I was desperately searching for an image for one hashtag, and finally, I found one relevant pic for the hashtag. I edited and shared it with our group before uploading it. One co-admin praised me for the image which I chose for a relevant hashtag. But it was deeply disliked by the admin of the hashtag. she immediately left the group. 

                    At that time I didn't realize she left the group because of me. I immediately messaged her privately and asked her the reason for leaving the group.  Initially didn't say but later she elaborated to me how much she loved the hashtag. She can tolerate anything but can't tolerate anything about the hashtag. I said sorry and asked her not to leave the page. 

                   After saying sorry I started to think about what mistake I made. After a few minutes, I realized the post which I edited was not from her perspective. I only thought about what I wanted. Dale Carnegie taught me a lesson 'if you want to win friends think about what they want.' You may think it's a silly one but for me, it's a mistake. People are not interested in what you want, they never gonna ask you. So I'm extremely sorry for my mistake and thank her for realizing my mistake. This was my first mistake.

                  It was around the second week of March. Tell me one thing, when you say everything about yourself or your all feelings to a person. Later the person ignores you or acts as if he/she knew nothing about you. Tell me, tell me how it feels?

                 I'm always wondering what kind of chit-chat today's lovers do!? When you say everything about yourself in the early days of love. Then what will be there to share every day? (I'm only talking about chat) daily good morning, good night, tea, coffee, dinner, and what!? Nothing. 

                 If this happened in your life then you will easily understand what I'm saying. Only dumbs will repeat this kind of mistake. And I'm that dumb. After the first accident (love), I decided not to share much about myself or my life. Days went on I was a bit normal. I met a new friend, she's too emotional and also a humorous person. Initially, we started to chat on Instagram. Later it went to WhatsApp, then voice msgs, and then calls. We both use to pull each other legs, and cracked many jokes. I still remember my promise to not share anything about myself with anyone. 

               As I mentioned above in the second week of March I was feeling so uncomfortable. I want to be a good listener, I use to listen to her a lot but later I started to say about myself most. I forgot my promise. I pressured her to listen to my thoughts, ideas, feelings, etc. I forgot to see things from her perspective. 

               


That week I realized I was making a mistake by sharing my feelings with her. I thought she too have similar feelings about me but I was wrong. At that moment I realized I was dumb. It was my second mistake. Everyone learns from their mistakes but I was repeating them. When I shared my feelings she acted as if she knew nothing about them, I felt very bad, I broke down. Her praises were just flattery. I'm not criticizing her, I failed to understand her. Currently, I'm trying to live in the present not thinking much about the past and future, learning new things. Let's see where it reaches.


Take what is useful discard what is not

-Hrk

ಸೋಮವಾರ, ಮಾರ್ಚ್ 7, 2022

 ಸದ್ದಿಲ್ಲದೇ ಪಸರಿಸುತ್ತಿದೆ ವಿಚ್ಛೇದನ ಎಂಬ ಮಾರಿ!


ಸುಂದರ ವೈವಾಹಿಕ ಬದುಕು ಯಾರಿಗೆ ಬೇಡ ಹೇಳಿ? ಆದರೆ ಇತ್ತೀಚಿನ ಬೆಳವಣಿಗೆ ನೋಡುತ್ತಾ ಹೋದರೆ ವಿಚಿತ್ರ ವಿಚಿತ್ರ ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲಿ ಕೌಟುಂಬಿಕ ಜೀವನಕ್ಕೆ ಛೇದ ಎಂಬಂತೆ ವಿಚ್ಛೇದನ ಸಮಸ್ಯೆ ಉಲ್ಬಣಿಸುತ್ತಿದೆ ! ಹಿಂದೆ ಒಂದು ಲೇಖನದಲ್ಲಿ ಹೇಳಿದ್ದೆ ಒಂದು ಕಾಫಿಗೂ,ಒಂದು ಸಹಿಗೆ ಕೂಡ ಡಿವೋರ್ಸ ಕೊಟ್ಟವರಿದ್ದಾರೆಂದು. ಈ ವಿಷಯದ ಮೇಲೆ ಮತ್ತೊಮ್ಮೆ ಬರೆಯಲು ನನಗೆ ಮನಸ್ಸಿರಲಿಲ್ಲ ,ಆದರೆ ಇತ್ತೀಚಿನ ಒಂದು ಘಟನೆ ಕೇಳಿ ಬಹಳೇ ನೋವಾಯಿತು. ಅದಕ್ಕೆ ಮತ್ತೊಮ್ಮೆ ಬರೆಯಲು ಅಣಿಯಾದೆ . ಬನ್ನೀ ಅದೇನೂ ಅಂತ ತಿಳಿಯೋಣ !


ಬಿ.ಆರ್.ಚೋಪ್ರಾ ಮಹಾಭಾರತ ಕೃಷ್ಣ ಪಾತ್ರದ ಖ್ಯಾತಿಯ ಶ್ರೀನಿತೀ಼ಶ ಭಾರದ್ವಾಜ ಅವರಿಂದ ಅವರ ಪತ್ನಿ ಸ್ಮಿತಾ ವಿಚ್ಛೇದನ ಪಡೆದದ್ದು. ಇಬ್ಬರೂ ದೊಡ್ಡ ಹುದ್ದೆಯಲ್ಲಿದ್ದವರು. ಈರ್ವರೂ 20 ವರ್ಷಗಳ ಜೀವನ ನಡೆಸಿದ್ದಾರೆ ಈ ದಂಪತಿಗಳಿಗೆ ಇಬ್ಬರು ಅವಳಿ-ಜವಳಿ ಮಕ್ಕಳು ಬೇರೆ . ಆದರೆ ಇಲ್ಲಿಯವರೆಗೆ ವಿಚ್ಛೇದನ ಕಾರಣ ತಿಳಿದು ಬಂದಿಲ್ಲ. ಇವರ ಹೊರತಾಗಿ ಸಮಂತಾ ಮತ್ತು ನಾಗಚೈತನ್ಯ ,ನಟ ಧನುಷ್‌ ರವರ ವಿಚ್ಛೇದನಗಳು. ಯಾಕೆ ಇವರ ಉದಾಹರಣೆ ಎಂದರೆ ಇವರು ನಮ್ಮ ನೆಚ್ಚಿನ ನಾಯಕ-ನಾಯಕಿಯರಲ್ಲವೇ , ಇವರು ಮಾಡುವುದೆ ನಾವು ಅನುಕರಿಸುವುದಿಲ್ಲವೇ? ವಿಚ್ಛೇದನಲ್ಲಿ ಸುಖವಿದೆ ಅಂತ ತಿಳಿದು ಹಾಸ್ಯಾಸ್ಪದ ಕಾರಣಗಳನ್ನು ಕೊಟ್ಟು ವಿಚ್ಛೇದನ ಪಡೆಯುತ್ತಿದ್ದಾರೆ ನಮ್ಮ ಜನ . ಇದರ ಸಲುವಾಗಿಯೆ ಎಷ್ಟೋ ಪ್ರಾಣಹಾನಿಯಾಗಿವೆ  , ಆಗುತ್ತಿವೆ. ಸಕಲ ಚರಾಚರ ವಸ್ತುಗಳಲ್ಲಿ ಬಹಳ ಬುದ್ಧಿವಂತ ಅನ್ನಿಸಿಕೊಂಡವರು ನಾವೇ ಹೀಗೆ ಮಾಡಿದರೆ ಹೇಗೆ? ಇದನ್ನು ತಡೆಯಬೇಕಲ್ಲವೇ?

ಹಾಗಿದ್ದರೇ ತಡೆಯವರು ಯಾರು ? ನಾಂದಿ ಹಾಡಿದವರೇ ತಡಯಬೇಕು ಅಂದರೆ ನಾವೇ ತಡೆಯಬೇಕು. ಚಿಕ್ಕವನಿದ್ದಾಗ ಒಮ್ಮೆ ಶ್ರೀಸತ್ಯಾತ್ಮತೀರ್ಥರ ಪ್ರವಚನದ ಮಾತು ನನ್ನ ಕಿವಿಗೆ ಬಿದ್ದಿತ್ತು , ಅದೇನೆಂದರೆ ʼ ಮನೆಯಲ್ಲಿ ಒಬ್ಬ ಅಜ್ಜ ಅಜ್ಜಿ ವಾಕಿಂಗ ಹೋಗುವ ಚಿತ್ರವನ್ನ ಗೋಡೆಯ ಮೇಲೆ ತೂಗು ಹಾಕಿ ,ದಿನಾಲು ಆ ಚಿತ್ರವನ್ನ ನೋಡಿ ಯೋಚಿಸಿ ಅವರು ಇಷ್ಟು ವಯಸ್ಸಾದರು ಇನ್ನು ಜೊತೆಗೆ ಇದ್ದಾರಲ್ಲ ಎಂದು?,  ಅದ್ಭುತವಲ್ಲವಾ ಇದು? ಯಾಕೆಂದರೆ ಅವರಿಗೆ ಗೊತ್ತು ʼ ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ ʼ ಅಂತ ಅವುಗಳನ್ನ ಎದುರಿಸಿ ಬದುಕುತ್ತಿರುವವರು ಅವರು. ಅಜ್ಜ-ಅಜ್ಜಿ ಹೇಳುಔ ಕಥೆ ಕೇಳದೆ ಇರಬಹುದು ನಾವು ಆದರೆ ಅಜ್ಜ-ಅಜ್ಜಿಯ ಗಟ್ಟಿ ಜೀವನ ನಮ್ಮ ಧ್ಯೇಯವಾಗಲಿ. ಅಜ್ಜ-ಅಜ್ಜಿಯ ಬದುಕೇ ನಮಗೆ ಬಾಳಿನಲ್ಲಿಯೂ ನಂಬಿಕೆ ಬರಿಸಲಿ ಅಂತ ಹೇಳಿ, ಅದೇನೇ‌ ಗ್ರಾಮರ್ ಮಿಸ್ಟೇಕ ಇದ್ರು ಆಶೀರ್ವದಿಸಿ. 


-ಯತ್ಸಾರಭೂತಂ ತದುಪಾಸನೀಯಂ


ಗುರುವಾರ, ಜನವರಿ 27, 2022

         


ನೀ-ಸ್ವಾರ್ಥ ನಿಸ್ವಾರ್ಥವಾಗಬೇಕು

                      ನಾವು ಹೇಗಿರಬೇಕು? ನಮ್ಮ ನಡವಳಿಕೆ ಹೇಗೆ ಇರಬೇಕು? ಎಂದು ನಾವು ದಿನಾಲು ಯೋಚಿಸುತ್ತೇವೆ. ಪರರಿಗೆ ಇದು ಮಾತ್ರ ಸ್ವಾರ್ಥ ಚಿಂತನೆಯಂತೆ ಕಾಣುತ್ತದೆ. ಹಾಗಂತ ಅವರು ಹೇಳಿದ ಅಥವಾ ಅಂದುಕೊಂಡ ಹಾಗೆ ಪರರಿಗಾಗಿ ಬದುಕಲು ಸಾಧ್ಯವಿಲ್ಲ.ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು? ಬನ್ನಿ ತಿಳಿಯೋಣ.
                     ಹೀಗೆ ಅಂತ ಗುರುತಿಸಲು ಹೊರಟಿರುವವರೆಗೆ ಅಚ್ಚರಿಯ ಹಾದಿ ಗೋಚರ ಮಾಡಿಕೊಡುವುದೇ ಪ್ರಪಂಚ. ಸಣ್ಣ ಸಣ್ಣ ಪ್ರಪಂಚಗಳು ಕೂಡಿ ಅನಂತ ಪ್ರಪಂಚವಾಗಿದೆ. ಈ ಅನಂತ ಪ್ರಪಂಚಗಳಲ್ಲೊಂದು ಶಬ್ದ ಪ್ರಪಂಚ. ಇದು ಕೂಡ ಅದ್ಭುತಗಳಾಗರ. ಹೀಗೆ ಯೋಚಿಸಬೇಕಾದರೆ ಹೊಳೆದಿದ್ದು ನಿಸ್ವಾರ್ಥ ಪದ. ಪ್ರಾಯಶಃ ಇದರ ಮೇಲೆ ಲೇಖನ ಬರಿಯಲೇ ಬೇಕು ಎಂದು 3 ತಿಂಗಳುಗಳ ಹಿಂದೆಯೇ ಯೋಚಿಸಿದ್ದೆ ಅದು ನಿಮ್ಮ ಮುಂದೆ ಈಗ ಇಡುತ್ತಿದ್ದೇನೆ. 
                         ನಿಸ್ವಾರ್ಥ ಶಬ್ದ ನೋಡಲು ಮೂರಕ್ಷರ, ಆದರೆ ಸ್ವಲ್ಪ ದೀರ್ಘವಾಗಿ, ಬಿಡಿಸಿ ಅರ್ಥೈಸಿಕೊಂಡರೆ ಇದರಲ್ಲೊಂದು ಅದ್ಭುತ ಅಡಗಿದೆ ಅಂತ ಅನ್ನಿಸುತ್ತದೆ. ಅದನ್ನ ಉದಾ ಮೂಲಕ ನೋಡೋಣ
'ರಾಮ ನಿಸ್ವಾರ್ಥಿ' ಇಲ್ಲಿ ಸಾಮಾನ್ಯ ಅರ್ಥದಲ್ಲಿ ನೋಡುವುದಾದರೆ ರಾಮ ಯಾವುದೇ ಸ್ವಾರ್ಥವನ್ನ ಬಯಸದಿರುವ ವ್ಯಕ್ತಿ ಎಂದಾಗುತ್ತದೆ. ಮತ್ತೀಗ ಕೇವಲ ನಿಸ್ವಾರ್ಥ ಶಬ್ದವನ್ನ ತೆಗೆದುಕೊಳ್ಳೋಣ  , ಹೇಗೆ ನಿಸ್ವಾರ್ಥ ಪದದಲ್ಲಿ ಸ್ವಾರ್ಥ ಅಡಗಿದೆಯೋ ಅಷ್ಟಾದರು ಸ್ವಾರ್ಥ ಮನುಷ್ಯನಲ್ಲಿ ಇರಬೇಕು, ಇನ್ನು ಸ್ವಲ್ಪ ಹೆಚ್ಚಿಗೆ ವಿವರಿಸುವುದಾದರೆ ನಿಸ್ವಾರ್ಥ ಪದದಲ್ಲಿ 'ನಿ'  ಹೃಸ್ವವಾಗಿದೆ 'ನೀ' ಅಂತ ದೀರ್ಘವಾಗಿಲ್ಲ. ನೀ ಎಂಬುವುದು ಅತಿಯನ್ನು ಬಿಂಬಿಸುತ್ತದೆ , ನಮ್ಮ ಪೂರ್ವಜರು, ಪೌರಾಣಿಕರು ಹೇಳುವ ಹಾಗೆ 'ಅತಿ ಸರ್ವತ್ರ ವರ್ಜಯೇತ್', ಅತಿಯಾದದ್ದನ್ನು ತ್ಯಜಿಸು ಎಂದಿದ್ದಾರೆ . ನೀ ಯೊಳಗಿರುವ ಗರ್ವವೆಂಬ ಕೊಂಬನ್ನು ಮುರಿದು ಅತಿ ಸ್ವಾರ್ಥಿಯಾಗಿರದೆ ನಿಸ್ವಾರ್ಥಿಯಾಗಿರೋಣ , ಅದಕ್ಕೆ ನೀ ಸ್ವಾರ್ಥಿಯಾಗದೆ ನಿಸ್ವಾರ್ಥಿಯಾಗು ಎಂದು ತಿಳಿಸುವ ಪ್ರಯತ್ನ ಇದಾಗಿದೆ.
                     ಮೇಲಿನ ಚಿಂತನೆ ನಿಮಗೆ ವಿಚಿತ್ರವೆನಿಸಬಹುದು ,ಏನಿದು ಒಂದು ಪದ,ಶಬ್ದವನ್ನ ಹೀಗೆ ಅರ್ಥೈಸಬಹುದಾ ಅಂತ. 
ಇಲ್ಲಿ ಕೇವಲ ಒಂದು ಅಕ್ಷರಕ್ಕೆ ಅರ್ಥ ಕೊಡುವ ಶಬ್ದಕೋಶಗಳು ಲಭ್ಯವಿವೆ (ಏಕಾಕ್ಷರ ಕೋಶ). ಒಂದೇ ಅಕ್ಷರಕ್ಕೆ ಅರ್ಥ ಇರಬೇಕಾದರೆ, ಅಕ್ಷರಗಳಿಂದ ಕೂಡಿದ ಶಬ್ದಗಳಲ್ಲಿ ಅರ್ಥವಿದ್ದೇ ಇರುತ್ತದೆ. ಅದನ್ನ ಆಧರಿಸಿಯೇ ಈ ಲೇಖನ ಬರೆಯುವ ಪ್ರಯತ್ನ ಮಾಡಿದ್ದು, ಈ ಪುಟ್ಟ ಲೇಖನವನ್ನ ಓದಿ ಒಳ್ಳೆಯ ಶೀರ್ಷಿಕೆ ನೀಡಿದ ಮಿತ್ರ ರಾಜೇಶ ಭಟ್‌ ಅವರಿಗೆ ಧನ್ಯವಾದಗಳು .ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರು ಆಶೀರ್ವದಿಸಿ.
-Hrk

ಲವ್ ಕೆಮಿಸ್ಟ್ರಿ

                      ಅದು ಕಾಲೇಜಿನ ಕೆಮೆಸ್ಟ್ರಿ ಕ್ಲಾಸು, ಶಾರ್ಟ, ಪಿಸು ಮಾತುಗಳು ದರಬಾರು. ಕುಹಕ ಕೆಮ್ಮಗಳಿಗೇನು ಅಲ್ಲೇನು ಕಮ್ಮಿಯಿಲ್ಲ. ಅವರವರ ಹುಡಗ ಹುಡಗಿಯರ ಬಗ...